ಆತನ ವಯಸ್ಸು ಅಬ್ಬಬ್ಬಾ ಅಂದ್ರೆ 13 ಇರಬಹುದಷ್ಟೆ. ಆಟ, ಪಾಠ ಅಂತ ಅಂದ್ಕೊಂದು ಇರೋ ವಯಸ್ಸು ಅದು. ಆದರೆ ಆ ಹುಡುಗನಿಗೆ ಅದೇನು ಹುಚ್ಚು ತಲೆಗೇರಿತ್ತೋ ಏನೋ, ಅಂಬೆಗಾಲು ಇಡೋ ಪುಟ್ಟ ಕಂದಮ್ಮನನ್ನ ಅಪಹರಣ ಮಾಡಿ, ನಿರ್ದಯವಾಗಿ ಕೊಂದು ಹಾಕಿದ್ದ. ಈ ಘಟನೆ ನಡೆದಿದ್ದು ಲಖನೌನಲ್ಲಿ. ಈಗ ಪುಟ್ಟ ಮಗುವನ್ನ ಕೊಂದ ಆರೋಪದ ಆಧಾರದ ಮೇಲೆ 13 ವರ್ಷದ ಬಾಲಕನನ್ನ ಬಂಧಿಸಲಾಗಿದೆ.
13 ವರ್ಷ ವಯಸ್ಸಲ್ಲೇ ಬಾಲಕನೊಬ್ಬ ಕೊಲೆಗಾರ ಆದ ಘಟನೆ ಇದು. “ಪಕ್ಕದಲ್ಲೇ ಇದ್ದ ಪರಿಚಯದವರ ಮನೆ. ಆ ಮನೆಯಲ್ಲಿ ಆಟ ಆಡುತ್ತಿದ್ದ ಪುಟ್ಟ ಮಗುವನ್ನ ಮನೆಯ ಹೊರಗೆ ಎತ್ತಿಕೊಂಡು ಬಂದೆ. ಆ ನಂತರ ನನ್ನ ಶಾಲೆಯ ಬಳಿ ಆಕೆಯನ್ನ ಕರೆದುಕೊಂಡು ಬಂದು, ಆಕೆಯನ್ನ ಅಲ್ಲೇ ಇದ್ದ ನೀರಿನ ತೊಟ್ಟಿಯಲ್ಲಿ ತಳ್ಳಿದೆ. ಕೊನೆಗೆ ಆಕೆಯ ಕಾಲಿಗೆ ಇಟ್ಟಿಗೆಯನ್ನ ಕಟ್ಟಿದ್ದೇನೆ. ಆಕೆ ಅಲ್ಲೇ ಸ್ವಲ್ಪ ಹೊತ್ತು ನರಳಾಡಿ ಕೊನೆಯುಸಿರೆಳೆದಿದ್ದಾಳೆ. ಸಾಕ್ಷಿ ಸಿಗಬಾರದು ಅಂತ ಬಟ್ಟೆಯನ್ನ ತೆಗೆದಿದ್ದೇನೆ’’ ಹೀಗಂತ ಆ ಬಾಲಕ ತನ್ನ ಪಾಲಕರ ಎದುರೇ ತಪ್ಪನ್ನ ಒಪ್ಪಿಕೊಂಡಿದ್ದಾನೆ. ಅಷ್ಟೇ ಅಲ್ಲ ಈ ಬಾಲಕನೇ ಆ ಸ್ಥಳಕ್ಕೆ ಕರೆದುಕೊಂಡು ಹೋಗಿ ತಾನು ಮಾಡಿರೋ ಕರ್ಮಕಾಂಡವನ್ನ ತೋರಿಸಿದ್ದಾನೆ.
ರಾತ್ರಿ ಅನ್ನ ಸೇವನೆ ಎಷ್ಟು ಸೂಕ್ತ…..? ಇಲ್ಲಿದೆ ಬಹುಮುಖ್ಯ ಸಲಹೆ
ಬಾಲಕಿ ತಂದೆ, ತನಗೆ ಕಪಾಳಮೋಕ್ಷ ಮಾಡಿದ್ದರು, ಅಷ್ಟೇ ಅಲ್ಲ ತನ್ನ ಮನೆಯವರಿಗೂ ಬೈದಿದ್ದರು. ಜೊತೆಗೆ ಎಲ್ಲರ ಮುಂದೆ ಅವಮಾನ ಕೂಡಾ ಮಾಡಿದ್ದರು ಅಂತ ಹುಡುಗ ಹೇಳಿಕೊಂಡಿದ್ದಾನೆ.
ಅಲಿಗಂಜ್ ಎಸಿಪಿ ಸೈಯದ್ ಅಲಿ ಅಬ್ಬಾಸ್ ಕೊಟ್ಟಿರೋ ಮಾಹಿತಿ ಪ್ರಕಾರ, ಸಾಯಿರ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಯೊಂದರ ನೀರಿನ ತೊಟ್ಟಿಯಲ್ಲಿ ಬಾಲಕಿಯ ಮೃತ ದೇಹ 2 ದಿನಗಳ ನಂತರ ಪತ್ತೆಯಾಗಿದೆ. ಬಾಲಕನೇ ಮಾಡಿರೋ ಕೃತ್ಯ ಒಪ್ಪಿಕೊಂಡಿರೋದಕ್ಕಾಗಿ ಈಗ ಆತನನ್ನ ಪ್ಯಾರಾಶೆಲ್ಟರ್ ಹೋಮ್ಗೆ ಕಳುಹಿಸಲಾಗಿದೆ.
ಈ ಕೊಲೆ ಪ್ರಕರಣದ ಬಗ್ಗೆ ಇನ್ನೂ ತನಿಖೆಯಾಗಬೇಕಾಗಿದೆ. ಬಾಲಕನೊಬ್ಬನೇ ಈ ಕೃತ್ಯ ಎಸಗಿದ್ದಾನೋ ಅಥವಾ ಬೇರೆಯವರು ಸಹ ಆತನಿಗೆ ಸಾಥ್ ಕೊಟ್ಟಿದ್ದಾರೋ ತನಿಖೆಯಿಂದ ಗೊತ್ತಾಗಬೇಕಾಗಿದೆ. ಇನ್ನೂ ಸಾಕ್ಷಿಗಳ ಹುಡುಕಾಟದಲ್ಲಿರೋ ಪೊಲೀಸರು ಸದ್ಯಕ್ಕೆ ಬಾಲಕನ ವಿರುದ್ಧ ಕೊಲೆ, ಅಪಹರಣ, ಹಾಗೂ ಸಾಕ್ಷ್ಯನಾಶದ ಪ್ರಕರಣ ದಾಖಲಿಸಿದ್ದಾರೆ. ಬಾಲಕನ ಮಾನಸಿಕ ಸ್ಥಿತಿ ಕುರಿತಾಗಿ ಈಗಾಗಲೇ ಮನೋವೈದ್ಯರಿಗೆ ತಿಳಿಸಲಾಗಿದೆ ಎಂದು ಎಸಿಪಿ ತಿಳಿಸಿದ್ದಾರೆ.