ಗಿನಿಯಾದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಗಿನಿಯಾದ ಕೊನಾಕ್ರಿಯದ ಪೆಟ್ರೋಲಿಯಂ ಕಂಪನಿಯ ಡಿಪೋದಲ್ಲಿ ಭಾರೀ ಸ್ಪೋಟ ಸಂಭವಿಸಿ 13 ಜನರು ಸಾವನ್ನಪ್ಪಿದ್ದು, 178 ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಮಧ್ಯರಾತ್ರಿಯ ನಂತರ ಈ ದುರಂತ ಘಟನೆ ನಡೆದಿದ್ದು, ಹೆಚ್ಚಿನ ಸರ್ಕಾರಿ ಕಚೇರಿಗಳನ್ನು ಹೊಂದಿರುವ ಕಲೂಮ್ ಆಡಳಿತ ಜಿಲ್ಲೆಗೆ ಹಾನಿಯನ್ನುಂಟು ಮಾಡಿದೆ. ಸಾವುನೋವುಗಳಲ್ಲಿ ವಿದೇಶಿಯರೂ ಸೇರಿದ್ದಾರೆ.
ಇಂಧನ ಡಿಪೋದಲ್ಲಿ ಹಡಗು ಬಂದ ವೇಳೆ ಸ್ಫೋಟ ಸಂಭವಿಸಿದೆ ಎಂದು ನಂಬಲಾಗಿದ್ದು, ಅಧಿಕಾರಿಗಳು ತುರ್ತು ತನಿಖೆ ನಡೆಸಲು ಆದೇಶಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಡಿಪೋವನ್ನು ದೂರದ ಸ್ಥಳಕ್ಕೆ ಸ್ಥಳಾಂತರಿಸುವ ಪ್ರಯತ್ನಗಳ ಹೊರತಾಗಿಯೂ, ಈ ಘಟನೆಯು ಸುರಕ್ಷತಾ ಪ್ರೋಟೋಕಾಲ್ಗಳು ಮತ್ತು ವಿಪತ್ತು ತಡೆಗಟ್ಟುವಿಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ.