ಆಂಧ್ರ ಪ್ರದೇಶದ ಶ್ರೀಕಾಕುಳಂನಲ್ಲಿ ಕಾಳಿಂಗ ಸರ್ಪವೊಂದು ಕಂಡು ಬಂದಿದೆ. ಇಲ್ಲಿನ ಕಾಂಚಿಲಿ ಪ್ರದೇಶದಲ್ಲಿ 13 ಅಡಿ ಉದ್ದದ ಕಾಳಿಂಗ ಸರ್ಪ ಕಾಣುತ್ತಲೇ ಅಲ್ಲಿನ ಜನರೆಲ್ಲಾ ಭಯದಲ್ಲಿ ಮುಳುಗಿದ್ದರು.
ಸ್ಥಳಕ್ಕೆ ಆಗಮಿಸಿದ ಬಾಲರಾಜು ಎಂಬ ಉರಗ ತಜ್ಞ ಕಾಳಿಂಗವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ. ತಮ್ಮ ಎಂದಿನ ಕಾಯಕಕ್ಕೆ ಹೊರಟಿದ್ದ ಕಾರ್ಮಿಕರ ಕಣ್ಣಿಗೆ ಕಾಳಿಂಗ ಬಿದ್ದಿದ್ದು, ಕೂಡಲೇ ಬಾಲರಾಜು ಅವರಿಗೆ ವಿಷಯ ಮುಟ್ಟಿಸಿದ್ದಾರೆ.
“ಪೂರ್ವ ಘಟ್ಟಗಳ ರಾಜ. ಜಗತ್ತಿನ ಅತಿ ದೊಡ್ಡ ವಿಷಪೂರಿತ ಹಾವಾಗಿದ್ದರೂ ಸಹ ಕಾಳಿಂಗ ಸರ್ಪ ಅಂಜುಬುರುಕನಾಗಿದ್ದು, ಮಾನವರ ಕಣ್ಣಿಗೆ ಬೀಳದೇ ಇರಲು ಯತ್ನಿಸುತ್ತದೆ. ವನ್ಯ ಜೀವಿ ಸಂರಕ್ಷಣಾ ಕಾಯಿದೆಯ ಶೆಡ್ಯೂಲ್ 2ರಲ್ಲಿ ಕಾಳಿಂಗವನ್ನು ಇರಿಸಲಾಗಿದೆ,” ಎಂದು ಆಶಿಶ್ ಹೆಸರಿನ ಪತ್ರಕರ್ತರೊಬ್ಬರು ಟ್ವೀಟ್ ಮಾಡಿದ್ದು, ಉರಗ ತಜ್ಞರು ಕಾಳಿಂಗವನ್ನು ಹಿಡಿಯುತ್ತಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
https://twitter.com/KP_Aashish/status/1645993143509319682?ref_src=twsrc%5Etfw%7Ctwcamp%5Etweetembed%7Ctwterm%5E1645993143509319682%7Ctwgr%5E33bc88fd3fafe1fbd9ab160a14a9bd6426cad9ed%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fon-camera-13-ft-long-king-cobra-rescued-by-snake-catcher-in-andhra-pradeshs-srikakulam