ಸಂಪತ್ತು, ಶ್ರೀಮಂತಿಕೆಯಲ್ಲಿ ಸಾಮಾನ್ಯವಾಗಿ ಪುರುಷರು ಪ್ರಾಬಲ್ಯ ಸಾಧಿಸುತ್ತಾರೆ. ವಿಶ್ವದ ಕೋಟ್ಯಾಧಿಪತಿಗಳ ಪಟ್ಟಿಯನ್ನು ನೋಡಿದರೆ ಎಲಾನ್ ಮಸ್ಕ್, ಜೆಫ್ ಬೆಜೋಸ್, ಮುಖೇಶ್ ಅಂಬಾನಿ, ಗೌತಮ್ ಅದಾನಿ ಹೀಗೆ ಪುರುಷರೇ ಮುಂಚೂಣಿಯಲ್ಲಿದ್ದಾರೆ. ಈ ಪಟ್ಟಿಯಲ್ಲಿ ಮಹಿಳೆಯರ ಹೆಸರುಗಳು ಕಾಣೆಯಾಗಿವೆ. ಆದರೆ ಇವರನ್ನೆಲ್ಲ ಮೀರಿಸುವಂತಹ ಶ್ರೀಮಂತ ಮಹಿಳೆಯೊಬ್ಬಳು ಚೀನಾದಲ್ಲಿದ್ದಳು. ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ ಈಕೆ.
1200 ಲಕ್ಷ ಕೋಟಿಗೆ ಒಡತಿ
ಗೌತಮ್ ಅದಾನಿ, ಎಲಾನ್ ಮಸ್ಕ್, ಜೆಫ್ ಬೆಜೋಸ್ ಅವರಂತಹ ಶ್ರೀಮಂತರ ಸಂಪೂರ್ಣ ಸಂಪತ್ತನ್ನು ಸೇರಿಸಿದರೂ ಈಕೆಯನ್ನು ಮೀರಿಸುವುದು ಅಸಾಧ್ಯ. ಅಷ್ಟೊಂದು ಆಸ್ತಿ ಹೊಂದಿದ್ದ ರಾಣಿ ಇವಳು. 16 ಟ್ರಿಲಿಯನ್ ಡಾಲರ್‌ಗಳ ಒಡತಿ ಚೀನಾದ ಸಾಮ್ರಾಜ್ಞಿ, ವೂ ಝೆಟಿಯನ್. ಜನರು ಅವಳನ್ನು ಸಾಮ್ರಾಜ್ಞಿ ವೂ ಎಂದೇ ಕರೆಯುತ್ತಾರೆ. ಈಕೆ ಭೂಮಿಯ ಮೇಲಿನ ಅತ್ಯಂತ ಶ್ರೀಮಂತ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದಾಳೆ.
ಅಷ್ಟೇ ಅಲ್ಲ ಚೀನಾದ ಅತ್ಯಂತ ಬುದ್ಧಿವಂತ ರಾಣಿಯೂ ಹೌದು. ವೂ ಶಾಂಕ್ಸಿ ಪ್ರಾಂತ್ಯದ ಶ್ರೀಮಂತ ಕುಟುಂಬದಲ್ಲಿ ಜನಿಸಿದಳು. ಟ್ಯಾಂಗ್‌ನ ಚಕ್ರವರ್ತಿ ಗಾವೋಜಾಂಗ್ ಲಿ ಯುವಾನ್‌ನನ್ನು ವಿವಾಹವಾದಳು. ರಾಜನ ಆರೋಗ್ಯ ಹದಗೆಟ್ಟ ನಂತರ ಅಧಿಕಾರ ವೂ ಕೈಗೆ ಬಂತು. ಕ್ರಿ.ಶ 655ರ ನಂತರ ಸಾಮ್ರಾಜ್ಯವನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನವನ್ನೀಕೆ ಆರಂಭಿಸಿದ್ಲು. ಅಧಿಕಾರಕ್ಕಾಗಿ ರಾಜಮನೆತನದ 12 ಸದಸ್ಯರನ್ನೂ ಕೊಂದಿದ್ದಳಂತೆ.
ಸಾಮ್ರಾಜ್ಞಿ ವೂ 15 ವರ್ಷಗಳ ಕಾಲ ಅಧಿಕಾರದಲ್ಲಿದ್ದರು. ಆಕೆಯ ಆಳ್ವಿಕೆಯಲ್ಲಿ ಚೀನಾದ ಆರ್ಥಿಕತೆ, ಚಹಾ ಮತ್ತು ರೇಷ್ಮೆ ವ್ಯಾಪಾರದಲ್ಲಿ ಭಾರಿ ಉತ್ಕರ್ಷವನ್ನು ದಾಖಲಿಸಿತು. ತನ್ನ ಸರ್ವಾಧಿಕಾರಿ ಧೋರಣೆಯ ಆಧಾರದ ಮೇಲೆ ವೂ ಸಾಮ್ರಾಜ್ಯವನ್ನು ವಿಸ್ತರಿಸಿದಳು ಜೊತೆಗೆ ಅಪಾರ ಸಂಪತ್ತಿಗೆ ಒಡತಿಯಾದಳು.