ಬೆಂಗಳೂರು: ವಿಜಯಪುರ ಜಿಲ್ಲೆಯಲ್ಲಿ 1200 ಎಕರೆ ಭೂಮಿಯನ್ನು ವಕ್ಪ್ ಬೋರ್ಡ್ ಗೆ ಸೇರಿಸಲು ಹುನ್ನಾರ ನಡೆಸಲಾಗಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.
ಕರ್ನಾಟಕವನ್ನು ಪಾಕಿಸ್ತಾನ ಮಾಡಲು ಹೊರಟಿದ್ದೀರಾ ಎಂದು ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಅವರನ್ನು ಪ್ರಶ್ನಿಸಿದ್ದಾರೆ.
ವಕ್ಸ್ ಬೋರ್ಡ್ ಯಾವ ಆಸ್ತಿ ತನ್ನದು ಎಂದು ಹೇಳುತ್ತದೆಯೋ ಅದನ್ನು 15 ದಿನದಲ್ಲಿ ಮಾಡಬೇಕೆಂದು ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ಸಚಿವರು ಹೇಳಿದರು ಎಂದು ಜಿಲ್ಲಾಧಿಕಾರಿಗಳು ಪಹಣಿ ಬದಲಿಸುತ್ತಿದ್ದಾರೆ. ರಾತ್ರೋರಾತ್ರಿ ಪಹಣಿಯಲ್ಲಿದ್ದ ರೈತರ ಹೆಸರನ್ನು ಬದಲಿಸಿ ವಕ್ಪ್ ಬೋರ್ಡ್ ಹೆಸರನ್ನು ಸೇರ್ಪಡೆ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.
ವಕ್ಫ್ ಬೋರ್ಡ್ ಯಾವ ಆಸ್ತಿ ತನ್ನದು ಎಂದು ಹೇಳುತ್ತದೆಯೋ ಅದನ್ನು ಸೇರ್ಪಡೆ ಮಾಡಲಾಗುತ್ತಿದೆ. ರೈತರ ಹೆಸರಲ್ಲಿರುವ ಜಮೀನುಗಳ ಪಹಣಿ ಬದಲಾವಣೆ ಮಾಡಲಾಗುತ್ತಿದೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.
ವಿಜಯಪುರ ಜಿಲ್ಲೆಯ ರೈತರ ಪಹಣಿಯಲ್ಲಿ ವಕ್ಫ್ ಎಂದು ಬರುತ್ತಿದೆ. ಜನರಿಗೆ ವಕ್ಫ್ ಕಾಯ್ದೆಗೆ ಕೇಂದ್ರ ಸರ್ಕಾರ ಯಾಕೆ ತಿದ್ದುಪಡಿ ತರುತ್ತಿದೆ ಎಂದು ಗೊತ್ತಿಲ್ಲ. ಕೆಲವು ದಿನಗಳ ಹಿಂದೆ ಸಚಿವ ಜಮೀರ್ ಅಹ್ಮದ್ ಜಿಲ್ಲೆಗಳಿಗೆ ಭೇಟಿ ನೀಡಿ, ವಕ್ಫ್ ಯಾವ ಆಸ್ತಿ ತನ್ನದು ಎಂದು ಹೇಳುತ್ತದೆಯೋ ಅದನ್ನು 15 ದಿನಗಳಲ್ಲಿ ವಕ್ಫ್ ಆಸ್ತಿ ಎಂದು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಹೇಳಿದ್ದಾರೆ. ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ ಎಂದು ರಾತ್ರೋರಾತ್ರಿಯಲ್ಲಿ ಪಹಣಿಯಲ್ಲಿ ಹೆಸರು ಬದಲಿಸಲು ಹೊರಟಿದ್ದಾರೆ. 15 ಸಾವಿರ ಎಕರೆ ತನ್ನದೆಂದು ವಕ್ಫ್ ಹೇಳುತ್ತಿದೆ. ಜಮೀರ್ ಅಹ್ಮದ್ ಹೇಳಿದ್ದಾರೆ ಎಂದು ರೈತರ ಜಮೀನನ್ನು ವಕ್ಫ್ ಬೋರ್ಡ್ ಗೆ ಸೇರ್ಪಡೆ ಮಾಡಲಾಗುತ್ತಿದೆ. ಆದರೆ ಯಾವ ರೀತಿ ರೈತರ ಜಮೀನು ವಕ್ಫ್ ಬೋರ್ಡ್ ಗೆ ಸೇರ್ಪಡೆ ಮಾಡಲಾಗ್ತಿದೆ ಎಂದು ತಿಳಿಸುತ್ತಿಲ್ಲ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ.