ಹಾರ್ಲೆ ಡೇವಿಡ್ಸನ್, ಹೆಸರು ಕೇಳಿದ್ರೇನೇ ಬೈಕ್ ಪ್ರಿಯರಿಗೆ ಥ್ರಿಲ್ ಆಗುತ್ತದೆ. ಅಮೆರಿಕದ ಹೆಸರಾಂತ ಮೋಟಾರ್ ಸೈಕಲ್ ಕಂಪನಿ ಇದು. ಹಾರ್ಲೆ ಡೇವಿಡ್ಸನ್ ಬೈಕ್‌ಗಳು ಬಹಳ ಜನಪ್ರಿಯ. ಎಷ್ಟೋ ಮಂದಿ ಕಂಪನಿಯ ಲೋಗೋವನ್ನು ಸಹ ಹಚ್ಚೆ ಹಾಕಿಸಿಕೊಳ್ತಾರೆ.
ಆ ಮಟ್ಟಿಗೆ ಹಾರ್ಲೆ ಡೇವಿಡ್ಸನ್ ಮೋಟಾರ್ ಸೈಕಲ್‌ಗಳು ಫೇಮಸ್ ಆಗಿವೆ. ಹಾರ್ಲೆ ಡೇವಿಡ್ಸನ್ ಇದೀಗ ಹೊಸ ಮೋಟಾರ್ ಸೈಕಲ್ ಒಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ತಯಾರಿಯಲ್ಲಿದೆ. ಸದ್ಯದಲ್ಲೇ ಹಾರ್ಲೆ ಡೇವಿಡ್ಸನ್ ನೈಟ್‌ಸ್ಟರ್ ಎಸ್ ರಸ್ತೆಗಿಳಿಯಬಹುದು.
ಕಂಪನಿಯ 120ನೇ ವಾರ್ಷಿಕೋತ್ಸವದ ಸ್ಪೆಷಲ್ ಇದು. ಪ್ರಸ್ತುತ ಸ್ಪೋರ್ಟ್‌ಸ್ಟರ್ ಶ್ರೇಣಿಯಲ್ಲಿ ನೈಟ್‌ಸ್ಟರ್ ಮೂರನೇ ಲಿಕ್ವಿಡ್-ಕೂಲ್ಡ್ ಮಾಡೆಲ್ ಆಗಿದೆ. ಇದು ಹೆಚ್ಚು ಭಿನ್ನವಾಗೇನಿಲ್ಲ, ಆದರೆ ಇದು ಪೇಂಟ್ ಸ್ಕೀಮ್‌ಗಳು ಮತ್ತು ರೆಟ್ರೊ ಹಾರ್ಲೆ-ಡೇವಿಡ್‌ಸನ್ ಚಿತ್ರಗಳೊಂದಿಗೆ ಆಲ್-ಬ್ಲ್ಯಾಕ್ ಬಾಡಿವರ್ಕ್‌ನಂತಹ ವಿಶಿಷ್ಟ ಲುಕ್ ಹೊಂದಿದೆ. ಹಾರ್ಲೆ ಡೇವಿಡ್ಸನ್ ನೈಟ್‌ಸ್ಟರ್ ಎಸ್‌ನ ಫೋಟೋಗಳು ಈಗಾಗ್ಲೇ ಸೋರಿಕೆಯಾಗಿವೆ. ಲೀಕ್ ಆಗಿರೋ ಚಿತ್ರಗಳ ಪ್ರಕಾರ ಸಾಫ್ಟೇಲ್ ಮತ್ತು ಟೂರಿಂಗ್ ಮಾಡೆಲ್ ಲೈನ್‌ಅಪ್ ಆಗಿರೋದು ಖಚಿತ. ಸಾಫ್ಟೇಲ್ ಫ್ಯಾಮಿಲಿ, ಫ್ಯಾಟ್ ಬಾಯ್ ಮತ್ತು ಹೆರಿಟೇಜ್ ಕ್ಲಾಸಿಕ್ ರೂಪದಲ್ಲಿ ಎರಡು ವಿಶೇಷ ಆವೃತ್ತಿಗಳನ್ನು ಪಡೆಯುತ್ತದೆ.
ಇವೆರಡೂ 1,868cc ಮಿಲ್ವಾಕೀ-ಎಂಟು 114 V-ಟ್ವಿನ್ ಎಂಜಿನ್ ಅನ್ನು ಹೊಂದಿವೆ. ಟೂರಿಂಗ್ ಮಾಡೆಲ್ ಲೈನ್‌ಅಪ್ ನಾಲ್ಕು ಮಾದರಿಗಳನ್ನು ಒಳಗೊಂಡಿರುತ್ತದೆ. ಇದು ಸ್ಟ್ರೀಟ್ ಗ್ಲೈಡ್ ಸ್ಪೆಷಲ್, ರೋಡ್ ಗ್ಲೈಡ್ ಸ್ಪೆಷಲ್, ಅಲ್ಟ್ರಾ ಲಿಮಿಟೆಡ್ ಮತ್ತು ಸಿವಿಒ ರೋಡ್ ಗ್ಲೈಡ್ ಲಿಮಿಟೆಡ್‌ನೊಂದಿಗೆ ಬರಲಿದೆ. ಈ ಬೈಕುಗಳಲ್ಲಿ, CVO ರೋಡ್ ಗ್ಲೈಡ್ ಲಿಮಿಟೆಡ್ ಮಾತ್ರ 1,917cc Milwaukee-Eight 117 ಇಂಜಿನ್ ಅನ್ನು ಬಳಸುತ್ತದೆ ಮತ್ತು ಉಳಿದವುಗಳು ಮೇಲೆ ತಿಳಿಸಿದ Softtail ಮಾದರಿಗಳಂತೆಯೇ ಅದೇ Milwaukee-Eight 114 V-ಟ್ವಿನ್ ಎಂಜಿನ್ ಅನ್ನು ಬಳಸುತ್ತವೆ. ಹಾರ್ಲೆ-ಡೇವಿಡ್ಸನ್ ಈ ವರ್ಷ ತನ್ನ 120 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದೆ. ಆಚರಣೆಯ ಭಾಗವಾಗಿ ಸಾಫ್ಟೇಲ್ ಮತ್ತು ಟೂರಿಂಗ್ ಮಾಡೆಲ್ ಲೈನ್‌ಅಪ್‌ಗಳಲ್ಲಿ ವಿಶೇಷ ಆವೃತ್ತಿಗಳನ್ನು ಪರಿಚಯಿಸಲಾಗುತ್ತದೆ.