12 ವರ್ಷದ ಬಾಲಕನ ಬುದ್ಧಿವಂತಿಕೆಯು ದೊಡ್ಡ ರೈಲು ಅಪಘಾತವನ್ನು ತಪ್ಪಿಸಿದೆ. ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಹಾನಿಗೊಳಗಾದ ಹಳಿಯನ್ನು ನೋಡಿದ 12 ವರ್ಷದ ಬಾಲಕ, ಮುಂದೆ ಬರುತ್ತಿದ್ದ ರೈಲಿನ ಮುಂದೆ ಕೆಂಪು ಅಂಗಿಯನ್ನು ಬೀಸಿದನು. ಮಗು ಬೀಸಿದ ಕೆಂಪು ಶರ್ಟ್ ನಿಂದಾಗಿ ಲೋಕೋ ಪೈಲಟ್ ಅಪಾಯವನ್ನು ಗ್ರಹಿಸಿದರು. ನಂತರ ಲೋಕೋ ಪೈಲಟ್ ತುರ್ತು ಬ್ರೇಕ್ ಹಾಕಿದರು ಮತ್ತು ದೊಡ್ಡ ರೈಲು ಅಪಘಾತವನ್ನು ತಪ್ಪಿಸಿದರು. ಈ ಘಟನೆಯನ್ನು ರೈಲ್ವೆ ಅಧಿಕಾರಿಯೊಬ್ಬರು ಸೋಮವಾರ ವರದಿ ಮಾಡಿದ್ದಾರೆ.
12 ವರ್ಷದ ಮಗುವಿನ ಜಾಗೃತಿಯು ದೊಡ್ಡ ರೈಲು ಅಪಘಾತ ಸಂಭವಿಸುವುದನ್ನು ತಡೆಯಿತು” ಎಂದು ಈಶಾನ್ಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಬ್ಯಸಾಚಿ ಡೇ ಹೇಳಿದರು. ಹಳಿ ಮುರಿದಿರುವುದನ್ನು ಗಮನಿಸಿದ ಬಾಲಕ ತಕ್ಷಣ ತನ್ನ ಕೆಂಪು ಶರ್ಟ್ ಮೂಲಕ ಮುಂಭಾಗದಿಂದ ಬರುತ್ತಿದ್ದ ರೈಲಿನ ಲೋಕೋ ಪೈಲಟ್ ಗೆ ಸಿಗ್ನಲ್ ನೀಡಿದ್ದಾನೆ.
ಹಾನಿಗೊಳಗಾದ ಟ್ರ್ಯಾಕ್ ನ ಒಂದು ಭಾಗವನ್ನು ದುರಸ್ತಿ ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಟ್ರ್ಯಾಕ್ ನಲ್ಲಿ ಮತ್ತೆ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗಿದೆ.ಮಗುವಿನ ಶೌರ್ಯಕ್ಕಾಗಿ ಎನ್ಎಫ್ ರೈಲ್ವೆ ಅಧಿಕಾರಿಗಳು ಶೌರ್ಯ ಪ್ರಮಾಣಪತ್ರ ಮತ್ತು ನಗದು ಬಹುಮಾನವನ್ನು ನೀಡಿ ಗೌರವಿಸಿದರು. ಮಾಲ್ಡಾ ಉತ್ತರ ಸಂಸದ ಖಗೆನ್ ಮುರ್ಮು ಮತ್ತು ಕಟಿಹಾರ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಸುರೇಂದ್ರ ಕುಮಾರ್ ಮಗುವಿನ ಮನೆಗೆ ಭೇಟಿ ನೀಡಿ ಮಗುವನ್ನು ಸನ್ಮಾನಿಸಿದ್ದಾರೆ ಎಂದು ವರದಿಗಳು ತಿಳಿಸಿದೆ. 12 ವರ್ಷದ ಬಾಲಕನ ಸಾಧನೆಯ ಸುದ್ದಿ ಎಲ್ಲೆಡೆ ವೈರಲ್ ಆಗಿದ್ದು, ನೆಟ್ಟಿಗರು ಶಹಬ್ಬಾಶ್ ಎಂದಿದ್ದಾರೆ.