
ಗುಜರಾತಿನ ಮೊರ್ಬಿಯಲ್ಲಿ ನಡೆದ ತೂಗು ಸೇತುವೆ ಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಈವರೆಗೆ 141 ಮಂದಿ ಸಾವನ್ನಪ್ಪಿದ್ದು, ಇನ್ನೂ ಸಾಕಷ್ಟು ಮಂದಿ ನಾಪತ್ತೆಯಾಗಿರುವ ಕಾರಣ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಭೀತಿ ಇದೆ.
ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಮೃತ ದೇಹಗಳು ಪತ್ತೆಯಾಗುತ್ತಲೇ ಇವೆ. ಈ ದುರಂತದಲ್ಲಿ ಬಿಜೆಪಿ ಸಂಸದರೊಬ್ಬರ ಕುಟುಂಬದ 12 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ರಾಜಕೋಟ್ ಬಿಜೆಪಿ ಸಂಸದ ಮೋಹನ್ ಭಾಯ್ ಕಲ್ಯಾಣ್ ಜಿ ಕುಂದರಿಯಾ ಅವರ ಸಹೋದರಿ ಕುಟುಂಬದ 12 ಮಂದಿ ಮೃತಪಟ್ಟಿದ್ದು, ಈ ಪೈಕಿ ಐವರು ಮಕ್ಕಳು ಎಂದು ಹೇಳಲಾಗಿದೆ. ಭಾನುವಾರ ಸಂಜೆ ನಡೆದ ಈ ದುರಂತ ಸ್ಥಳದಲ್ಲಿ ಈಗ ಶೋಕ ಮಡುಗಟ್ಟಿದ್ದು, ಇನ್ನೂ ನಾಪತ್ತೆಯಾಗಿರುವ ತಮ್ಮವರಿಗಾಗಿ ಜನ ಹುಡುಕಾಟ ನಡೆಸಿದ್ದಾರೆ.