alex Certify BREAKING NEWS: ಎನ್ ಕೌಂಟರ್ ನಲ್ಲಿ 12 ಮಾವೋವಾದಿ ನಕ್ಸಲರ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಎನ್ ಕೌಂಟರ್ ನಲ್ಲಿ 12 ಮಾವೋವಾದಿ ನಕ್ಸಲರ ಹತ್ಯೆ

ಮುಂಬೈ: ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ 12 ನಕ್ಸಲರು ಹತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯಾಹ್ನದ ವೇಳೆಗೆ ಭಾರೀ ಗುಂಡಿನ ಚಕಮಕಿ ಆರಂಭವಾಗಿ ಸುಮಾರು 6 ಗಂಟೆಗೂ ಹೆಚ್ಚು ಕಾಲ ಸಂಜೆಯವರೆಗೂ ನಿರಂತರ ಗುಂಡಿನ ಚಕಮಕಿ ನಡೆಯಿತು. ಶೋಧದ ನಂತರ 3 AK47, 2 INSAS, 1 ಕಾರ್ಬೈನ್ ಮತ್ತು 1 SLR, 7 ವಾಹನ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಗಡ್‌ಚಿರೋಲಿಯಿಂದ ಕಾರ್ಯಾಚರಣೆ ನಡೆಸಲಾಗಿದ್ದು, ಗ್ರಾಮದ ಬಳಿ 12-15 ನಕ್ಸಲರು ಕ್ಯಾಂಪ್‌ ಹಾಕಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಬಂದಿದ್ದರಿಂದ ಛತ್ತೀಸ್‌ಗಢದ ಗಡಿಯ ವಂಡೋಲಿ ಗ್ರಾಮದ ಬಳಿ 7 ಸಿ60 ತಂಡಗಳನ್ನು ಡಿವೈಎಸ್ಪಿಗಳ ನೇತೃತ್ವದಲ್ಲಿ ಕಳುಹಿಸಲಾಗಿದೆ.. ಸಿ60 ರ ಓರ್ವ ಪಿಎಸ್‌ಐ ಮತ್ತು ಓರ್ವ ಜವಾನನಿಗೆ ಗುಂಡು ತಗುಲಿ ಗಾಯಗಳಾಗಿವೆ. ಅಪಾಯದಿಂದ ಪಾರಾಗಿದ್ದು, ಅವರನ್ನು ನಾಗ್ಪುರಕ್ಕೆ ಸ್ಥಳಾಂತರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...