ಮಿಜೋರಾಂನಲ್ಲಿ ಸೋಮವಾರ ಕಲ್ಲು ಕ್ವಾರಿಯೊಂದು ಕುಸಿದು ಬಿದ್ದ ಪರಿಣಾಮ ಬಿಹಾರದ ಹತ್ತಾರು ಕಾರ್ಮಿಕರು ಸಿಲುಕಿಕೊಂಡಿದ್ದಾರೆ.
ಮೂಲಗಳ ಪ್ರಕಾರ, ಹ್ನಾಥಿಯಾಲ್ ಜಿಲ್ಲೆಯ ಮೌದರ್ಹ್‌ನಲ್ಲಿರುವ ಖಾಸಗಿ ಕಂಪನಿಯ ಕಾರ್ಮಿಕರು ತಮ್ಮ ಊಟದ ವಿರಾಮದಿಂದ ಮರಳಿ ಕಲ್ಲು ಕ್ವಾರಿ ಒಳಗೆ ಪ್ರವೇಶಿಸಿದ್ದರು.
ಕ್ವಾರಿಯೊಂದು ಕುಸಿದು 12 ಕಾರ್ಮಿಕರು, ಐದು ಹಿಟಾಚಿ ಯಂತ್ರಗಳು ಮತ್ತು ಇತರ ಡ್ರಿಲ್ಲಿಂಗ್ ಯಂತ್ರಗಳು ಕ್ವಾರಿಯ ಅಡಿಯಲ್ಲಿ ಹೂತುಹೋಗಿವೆ ಎಂದು ಮೂಲಗಳು ವರದಿ ಮಾಡಿವೆ. ಲೀಟ್ ಗ್ರಾಮ ಮತ್ತು ಹ್ನಾಹಿಯಾಲ್ ಪಟ್ಟಣದ ಸ್ವಯಂಸೇವಕರು ತಕ್ಷಣ ರಕ್ಷಣಾ ಕಾರ್ಯಾಚರಣೆಗಾಗಿ ಸ್ಥಳಕ್ಕೆ ತಲುಪಿದರು.
ರಾಜ್ಯ ವಿಪತ್ತು ನಿರ್ವಹಣಾ ಪಡೆ, ಗಡಿ ಭದ್ರತಾ ಪಡೆ ಮತ್ತು ಅಸ್ಸಾಂ ರೈಫಲ್ಸ್‌ಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ನೆರವಿಗಾಗಿ ಕರೆ ನೀಡಲಾಗಿದೆ.
ದುರ್ಘಟನೆ ನಡೆದ ಕ್ವಾರಿ ಎರಡೂವರೆ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ.