alex Certify ಬೆಚ್ಚಿಬೀಳಿಸುವಂತಿದೆ ಕಳೆದೊಂದು ದಶಕದಲ್ಲಿ ದೇಶದಲ್ಲಿ ಮೃತಪಟ್ಟ ಆನೆಗಳ ಸಂಖ್ಯೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಕಳೆದೊಂದು ದಶಕದಲ್ಲಿ ದೇಶದಲ್ಲಿ ಮೃತಪಟ್ಟ ಆನೆಗಳ ಸಂಖ್ಯೆ..!

ದೇಶದಲ್ಲಿ ಕಳೆದ 10 ವರ್ಷಗಳಿಂದ ಡಿಸೆಂಬರ್​ 31,2020 ರವರೆಗೆ ನೈಸರ್ಗಿಕ ಕಾರಣಗಳನ್ನು ಹೊರತುಪಡಿಸಿ ಇತರೆ ಕಾರಣಗಳಿಂದ ಬರೋಬ್ಬರಿ 1160 ಆನೆಗಳು ಸಾವನ್ನಪ್ಪಿವೆ ಎಂದು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಮಾಹಿತಿ ನೀಡಿದೆ.

ಇವುಗಳಲ್ಲಿ ವಿದ್ಯುತ್​ ತಂತಿ ತಾಗಿ 741 ಆನೆಗಳು ಬಲಿಯಾದರೆ, ರೈಲು ಅಪಘಾತದಲ್ಲಿ 186 ಆನೆಗಳು ಸಾವನ್ನಪ್ಪಿವೆ. 169 ಆನೆಗಳನ್ನು ಬೇಟೆಯಾಡಲಾಗಿದೆ ಹಾಗೂ 64 ಆನೆಗಳಿಗೆ ವಿಷಪ್ರಾಶನವಾಗಿದೆ ಎಂಬ ವಿಚಾರ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಬಯಲಾಗಿದೆ.

ಕರ್ನಾಟಕ ಹಾಗೂ ಒಡಿಶಾದಲ್ಲಿ ತಲಾ 133 ಆನೆಗಳು ವಿದ್ಯುತ್​ ಅಪಘಾತದಲ್ಲಿ ಸಾವನ್ನಪ್ಪಿದ್ದರೆ ಆಸ್ಸಾಂನಲ್ಲಿ 129 ಆನೆಗಳು ಇದೇ ಕಾರಣದಿಂದ ಮೃತಪಟ್ಟಿವೆ. ರೈಲು ಅಪಘಾತದಲ್ಲಿ ಆಸ್ಸಾಂ 62 ಆನೆಗಳ ಸಾವನ್ನು ವರದಿ ಮಾಡುವ ಮೂಲಕ ಮೊದಲ ಸ್ಥಾನದಲ್ಲಿದೆ. ಪಶ್ಚಿಮ ಬಂಗಾಳದಲ್ಲಿ 57 ಆನೆಗಳು ಸಾವನ್ನಪ್ಪಿದ್ದು ಎರಡನೇ ಸ್ಥಾನದಲ್ಲಿದೆ.

ಕಳೆದ 10 ವರ್ಷಗಳಲ್ಲಿ 169 ಆನೆಗಳು ಕಳ್ಳ ಬೇಟೆಗಾರರ ದಾಳಿಗೆ ಬಲಿಯಾಗಿವೆ. ಓಡಿಶಾದಲ್ಲಿ ಅತೀ ಹೆಚ್ಚು ಅಂದರೆ 49 ಆನೆಗಳನ್ನು ಬೇಟೆಯಾಡಲಾಗಿದೆ. ಕೇರಳದಲ್ಲಿ 23 ಆನೆಗಳನ್ನು ಬೇಟೆಯಾಡಲಾಗಿದೆ.

ಕಾಡೆಮ್ಮೆ ಮೇಲೆ ಹಲ್ಲೆ ಮಾಡಿದ ಕ್ರೂರಿ; ನೆಟ್ಟಿಗರ ವ್ಯಾಪಕ ಖಂಡನೆ

ಆಸ್ಸಾಂನಲ್ಲಿ ಅತೀ ಹೆಚ್ಚು ಅಂದರೆ 32 ಆನೆಗಳಿಗೆ ವಿಷಪ್ರಾಶನವಾಗಿದೆ. ಓಡಿಶಾದಲ್ಲಿ 15 ಆನೆಗಳು ವಿಷಾಹಾರ ಸೇವಿಸಿ ಮೃತಪಟ್ಟಿವೆ.

2017ರಲ್ಲಿ ಸರ್ಕಾರವು ತಯಾರಿಸಿದ ವರದಿಯ ಪ್ರಕಾರ ಭಾರತದಲ್ಲಿ ಒಟ್ಟು 29,964 ಆನೆಗಳಿವೆ ಎಂದು ಸಚಿವಾಲಯ ತಿಳಿಸಿದೆ. ತಮಿಳುನಾಡು, ಕೇರಳ, ಕರ್ನಾಟಕ, ಅಂಡಮಾನ್​ ಹಾಗೂ ನಿಕೋಬಾರ್​ ದ್ವೀಪ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರಗಳನ್ನೊಳಗೊಂಡ ದಕ್ಷಿಣ ಭಾರತದ ಪ್ರದೇಶದಲ್ಲಿ ಅತೀ ಹೆಚ್ಚು ಅಂದರೆ 14,612 ಆನೆಗಳಿವೆ.

ಅರುಣಾಚಲ ಪ್ರದೇಶ, ಆಸ್ಸಾಂ, ಮೇಘಾಲಯ, ತ್ರಿಪುರ, ನಾಗಾಲ್ಯಾಂಡ್​, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಣಿಪುರ ಹಾಗೂ ಮಿಜೋರಾಂಗಳಲ್ಲಿ ಒಟ್ಟು 10,139 ಆನೆಗಳಿವೆ ಎನ್ನಲಾಗಿದೆ.

ಕರ್ನಾಟಕ – 6049 , ಆಸ್ಸಾಂ – 5719, ಕೇರಳ – 5706 ಹಾಗೂ ತಮಿಳುನಾಡಿನಲ್ಲಿ 2761 ಆನೆಗಳಿದ್ದು, ಇವು ಭಾರತದಲ್ಲಿ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ದೇಶದ ಟಾಪ್​ 4 ರಾಜ್ಯಗಳಾಗಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...