110 ಹಳ್ಳಿಗಳಿಗೆ ಕಾವೇರಿ, ಇದು ಬೆಂಗಳೂರಿನ ಡ್ರೀಮ್ ಪ್ರಾಜೆಕ್ಟ್ ಎಂದರೆ ತಪ್ಪಾಗಲಿಕ್ಕಿಲ್ಲ. ಬೆಂಗಳೂರಿನ ಪರಿಧಿಯಲ್ಲಿರುವ ಪ್ರದೇಶಗಳಿಗೆ ಕಾವೇರಿ ನೀರು ಒದಗಿಸುವ ಈ ಯೋಜನೆ ಈಗಾಗಲೇ ಅಂತಿಮ ಹಂತದಲ್ಲಿದೆ. ಈ ಬಗ್ಗೆ ಜಲಮಂಡಳಿಯಿಂದ ಮತ್ತೊಂದು ಮಹತ್ವದ ಮಾಹಿತಿ ಲಭ್ಯವಾಗಿದ್ದು, ಯೋಜನೆಯ ಐದನೇ ಹಂತದ ಕಾಮಗಾರಿಯನ್ನು ಚುರುಕುಗೊಳಿಸಿದೆ ಎಂದು ತಿಳಿದು ಬಂದಿದೆ.
ಎಲ್ಲಾ ಅಂದುಕೊಂಡಂತೆ ಆದ್ರೆ, ಈ ವರ್ಷಾಂತ್ಯದೊಳಗೆ ಐದನೇ ಹಂತದ ಕಾಮಗಾರಿ ಸಂಪೂರ್ಣವಾಗಲಿದೆ. ಒಂದು ವೇಳೆ ಈ ವರ್ಷದೊಳಗೆ ಕಾಮಗಾರಿ ಸಂಪೂರ್ಣವಾಗಿ ಆದರೆ ಗಡುವಿನ ಆರು ತಿಂಗಳಿಗೂ ಮೊದಲೇ ಯೋಜನೆ ಕಾರ್ಯಗತವಾದಂತಾಗುತ್ತದೆ. ಇದರ ಮೂಲಕ 110 ಹಳ್ಳಿಗಳಿಗೆ ಜಲಮಂಡಳಿ ಸಮಯಕ್ಕೂ ಮೊದಲೇ ನೀರು ಸರಬರಾಜು ಮಾಡಲಿದೆ.
ಆಯುಷ್ ಬೆಂಬಲಿತ ಆರ್ಯುವೇದಿಕ್ ಗಿಡಮೂಲಿಕೆಯಿಂದ ಯಕೃತ್ತಿನ ಮೇಲೆ ಹಾನಿ: ಅಧ್ಯಯನದಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ
ಕಾಮಗಾರಿ ಸಾಗುತ್ತಿರುವ ವೇಗ ನೋಡಿದರೆ, ಈ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಮುಗಿಯುವ ಸಾಧ್ಯತೆಯಿದೆ. ಆದರೆ ಮಳೆಗಾಲದ ಬಗ್ಗೆಯು ಗಮನ ಹರಿಸಿದ್ದು, ಆ ವೇಳೆ ಕಾಮಗಾರಿ ವೇಗ ಕಳೆದುಕೊಳ್ಳಬಹುದು. ಹೀಗಾಗಿ ಆದಷ್ಟು ಬೇಗ ಅಂದರೆ ಬೇಸಿಗೆ ಕಾಲದಲ್ಲೇ ಕಾಮಗಾರಿಯನ್ನು ಸಂಪೂರ್ಣವಾಗಿ ಮುಗಿಸಿ ಎಂದು ಪ್ರಾಜೆಕ್ಟ್ ಇಂಜಿನಿಯರ್ ಗಳಿಗೆ ಆದೇಶ ನೀಡಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ಎನ್.ಜಯರಾಮ್ ಮಾಹಿತಿ ನೀಡಿದ್ದಾರೆ.
ನವೆಂಬರ್ ತಿಂಗಳೊಳಗೆ ಯೋಜನೆಯ ಕಾಮಗಾರಿ ಮುಗಿಸಿ, ಒಂದು ತಿಂಗಳ ಕಾಲ ಅಂದರೆ ಡಿಸೆಂಬರ್ ತಿಂಗಳಿಡೀ ನೀರು ಸರಬರಾಜು ಮಾಡಲು ಎಲ್ಲೆಡೆ ಸರಿಯಾಗಿ ನೆಟ್ವರ್ಕ್ ನೀಡಲಾಗಿದೆಯೆ ಎಂದು ಪರೀಕ್ಷೆ ಮಾಡುತ್ತೇವೆ. ತೊರೆಕಾಡನಹಳ್ಳಿ, ಹಾರೋಹಳ್ಳಿ ಹಾಗೂ ತಾತಗುಣಿ, ಈ ಮೂರು ಪ್ರದೇಶಗಳಲ್ಲಿ ಮೂರು ಪಂಪ್ ಹೌಸ್ ಗಳನ್ನ ನಿರ್ಮಿಸಲಾಗುತ್ತಿದೆ. ನೀರು ಸಂಗ್ರಹಿಸಲು ಏಳು ನೆಲಮಟ್ಟದ ಜಲಾಶಯಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ 40% ಕೆಲಸ ಆಗಿದೆ ಎಂದು ಜಲಮಂಡಳಿಯ ಹಿರಿಯ ಅಭಿಯಂತರೊಬ್ಬರು ಮಾಹಿತಿ ನೀಡಿದ್ದಾರೆ.