
ಪುಣೆಯಲ್ಲಿ ನಡೆದ ದುರಂತ ಘಟನೆಯೊಂದರಲ್ಲಿ ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದಾಗ ಚೆಂಡು ತನ್ನ ಖಾಸಗಿ ಭಾಗಕ್ಕೆ ಬಡಿದು 11 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಈ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬಾಲಕ ಶೌರ್ಯ ಬೌಲಿಂಗ್ ಮಾಡುತ್ತಿದ್ದಾಗ ಬ್ಯಾಟ್ಸ್ ಮನ್ ಚೆಂಡನ್ನು ನೇರವಾಗಿ ಅವನ ಕಡೆಗೆ ಹೊಡೆದಿದ್ದಾನೆ. ವೇಗವಾಗಿ ಬಂದ ಚೆಂಡು ಬಲವಾಗಿ ಶೌರ್ಯನ ಖಾಸಗಿ ಭಾಗಕ್ಕೆ ಬಡಿದಿದೆ . ಇದರಿಂದ ಶೀಘ್ರದಲ್ಲೇ ಶೌರ್ಯ ನೆಲದ ಮೇಲೆ ಕುಸಿದಿದ್ದಾನೆ.
ಅವನ ಸ್ನೇಹಿತರು ತಕ್ಷಣವೇ ಧಾವಿಸಿ ಆತತನ್ನು ಮೇಲೇಳಿಸಲು ಪ್ರಯತ್ನಿಸಿದರು. ನಂತರ ಶೌರ್ಯನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಘಟನೆ ಬಗ್ಗೆ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಾಗಿದೆ.