ತುಮಕೂರು: 11 ವರ್ಷದ ಪುತ್ರಿಯೇ ತನ್ನ ತಂದೆಯ ಅಂತ್ಯ ಸಂಸ್ಕಾರದ ವಿಧಿ ವಿಧಾನ ನೆರವೇರಿಸಿದ ಘಟನೆ ತುಮಕೂರು ತಾಲೂಕಿನ ಪೆಮ್ಮನಹಳ್ಳಿಯಲ್ಲಿ ನಡೆದಿದೆ.
6ನೇ ತರಗತಿ ಓದುತ್ತಿರುವ ಮೋನಿಷಾ ತಂದೆಯ ಅಂತಿಮ ಅಂತಿಮ ವಿಧಿ ವಿಧಾನ ನೆರವೇರಿಸಿದ ಬಾಲಕಿ. ಆಟೋ ಚಾಲಕರಾಗಿದ್ದ 48 ವರ್ಷದ ಕೆಂಪರಾಜು ಕ್ಯಾನ್ಸರ್ ಕಾಯಿಲೆಯಿಂದ ಎರಡು ದಿನಗಳ ಹಿಂದೆ ಮೃತಪಟ್ಟಿದ್ದಾರೆ. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಹಿರಿಯ ಪುತ್ರಿ ಮೋನಿಷಾ ಮೃತಪಟ್ಟ ತಂದೆಯ ಅಂತ್ಯ ಸಂಸ್ಕಾರ ನೆರವೇರಿಸುವ ಮೂಲಕ ಗಂಡು ಮಕ್ಕಳು ಇಲ್ಲವೆನ್ನುವ ಕೊರಗು ಇಲ್ಲವಾಗಿಸಿದ್ದಾಳೆ.
2022ರ ಅಕ್ಟೋಬರ್ ನಲ್ಲಿ ತುಮಕೂರು ನಗರದಲ್ಲಿ ಗಂಗಾಧರ್ ಎಂಬುವರು ಮೃತಪಟ್ಟ ಸಂದರ್ಭದಲ್ಲಿ ಗಂಡು ಮಕ್ಕಳು ಇಲ್ಲದ ಅವರ ಇಬ್ಬರು ಹೆಣ್ಣು ಮಕ್ಕಳಾದ ಸವಿತಾ ಮತ್ತು ಲಕ್ಷ್ಮಿ ತಂದೆಯ ಅಂತ್ಯ ಸಂಸ್ಕಾರದ ವಿಧಿ ವಿಧಾನ ನೆರವೇರಿಸಿ ಮಾದರಿಯಾಗಿದ್ದರು.