alex Certify ಕೇವಲ 11 ನೇ ವಯಸ್ಸಿಗೆ ಪದವಿ ಶಿಕ್ಷಣ ಪೂರೈಸಿದ್ದಾನೆ ಈ ಬಾಲಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ 11 ನೇ ವಯಸ್ಸಿಗೆ ಪದವಿ ಶಿಕ್ಷಣ ಪೂರೈಸಿದ್ದಾನೆ ಈ ಬಾಲಕ….!

11 ವರ್ಷದ ಬಾಲಕ ಲೌರೆಂಟ್​​ ಸಿಮೋನ್ಸ್​ ಎಂಬಾತ ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ 20 ವರ್ಷದ ಯುವಕರು ಮಾಡುವಂತಹ ಸಾಧನೆಯೊಂದನ್ನ ಮಾಡಿ ತೋರಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.

ಬೆಲ್ಜಿಯಂನ ಒಸ್ಟೆಂಡ್​​​ನ ನಿವಾಸಿಯಾದ 11 ವರ್ಷದ ಲೌರೆಂಟ್​​ ಕೇವಲ 11 ವರ್ಷದ ಪ್ರಾಯಕ್ಕೆ ವಿಶ್ವವಿದ್ಯಾಲಯದಲ್ಲಿ ಪದವೀಧರ ಪ್ರಮಾಣ ಪತ್ರವನ್ನ ಪಡೆದಿದ್ದಾನೆ. ಈ ಮೂಲಕ ಜಗತ್ತಿನ ಎರಡನೇ ಅತೀ ಪುಟ್ಟ ಪದವೀಧರ ಎಂಬ ಸಾಧನೆಯನ್ನ ಮಾಡಿದ್ದಾನೆ.

ಈ ಪುಟಾಣಿ ಬಾಲಕ ಆಂಟ್ವರ್ಪ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ಪದವಿಯನ್ನ ಪಡೆದಿದ್ದಾನೆ. ಸಾಮಾನ್ಯ ವಯಸ್ಸಿನ ವಿದ್ಯಾರ್ಥಿಗಳು 3 ವರ್ಷದ ವ್ಯಾಸಂಗದ ಬಳಿಕ ಡಿಗ್ರಿ ಪದವಿಯನ್ನ ಪಡೆದರೆ ಈ ಪುಟ್ಟ ಬಾಲಕ ಕೇವಲ 1 ವರ್ಷದಲ್ಲಿ ಈ ಪದವಿಯನ್ನ ಪಡೆದಿದ್ದಾನೆ.

ಅಷ್ಟು ಮಾತ್ರವಲ್ಲದೇ ಈತ 85 ಪ್ರತಿಶತ ಅಂಕವನ್ನೂ ಸಹ ಸಂಪಾದಿಸಿದ್ದಾನೆ. ಇದು ಈತನ ಎಲ್ಲಾ ಸಹಪಾಠಿಗಳಿಗಿಂತ ಹೆಚ್ಚಿನ ಅಂಕವಾಗಿದೆ.

ಸಿಮೋನ್ಸ್​ ಅತೀ ಚಿಕ್ಕ ವಯಸ್ಸಿನಲ್ಲೇ ಪದವಿಯನ್ನ ಪಡೆದ ಎರಡನೇ ಅತೀ ಚಿಕ್ಕ ವಯಸ್ಸಿನ ವಿದ್ಯಾರ್ಥಿಯಾಗಿದ್ದಾನೆ. 1994ರಲ್ಲಿ ಮೈಕೆಲ್​ ಕೀರ್ನಿ ಎಂಬ ಹೆಸರಿನ ಬಾಲಕ ತನ್ನ 10 ವರ್ಷ ವಯಸ್ಸಿನಲ್ಲಿ ದಕ್ಷಿಣ ಅಲಬಾಮಾ ವಿಶ್ವವಿದ್ಯಾಲಯದಲ್ಲಿ ಮಾನವಶಾಸ್ತ್ರ ವಿಭಾಗದಲ್ಲಿ ಪದವಿಯನ್ನ ಸಂಪಾದಿಸಿದ್ದ.

ಸಿಮೋನ್ಸ್​ ಮೈಕೆಲ್​ ದಾಖಲೆಯನ್ನ ಮುರಿಯುವದರಲ್ಲೇ ಇದ್ದ. ಆದರೆ 2019ರಲ್ಲಿ ನೆದರ್​ಲೆಂಡ್​ನ ಐಂಡ್‌ಹೋವನ್ ವಿಶ್ವವಿದ್ಯಾಲಯವು ಈತನಿಗೆ 10 ವರ್ಷ ವಯಸ್ಸಾಗದ ಹೊರತು ಪದವಿ ವ್ಯಾಸಂಗ ಮಾಡಲು ಅವಕಾಶ ನೀಡೋದು ಸಾಧ್ಯವಿಲ್ಲ ಎಂದು ಹೇಳಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...