ನವದೆಹಲಿ: ಖಾಸಗಿ ಹೂಡಿಕೆಯನ್ನು ಆಕರ್ಷಿಸಲು ಸ್ವಯಂಪ್ರೇರಿತ ವಾಹನ-ಫ್ಲೀಟ್ ಆಧುನೀಕರಣ ಕಾರ್ಯಕ್ರಮ (ವಿ-ವಿಎಂಪಿ) ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆಗೆ 11 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಒಳಪಡಿಸಲಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಹೇಳಿದೆ.
2022ರ ನವೆಂಬರ್ 14ರಂತೆ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯಗಳಿಗೆ ಆಸಕ್ತಿ ತೋರಿದ 117 ಹೂಡಿಕೆದಾರರ ಅರ್ಜಿಗಳು ಪ್ರಕ್ರಿಯೆಯಲ್ಲಿವೆ, ಅವುಗಳಲ್ಲಿ 36 ಅರ್ಜಿಗಳನ್ನು ಆಯಾ ರಾಜ್ಯ ಸರ್ಕಾರಗಳು ಅನುಮೋದಿಸಿವೆ.
ಗುಜರಾತ್, ಉತ್ತರ ಪ್ರದೇಶ, ಕರ್ನಾಟಕ, ಆಂಧ್ರಪ್ರದೇಶ, ಒಡಿಶಾ, ಮಧ್ಯಪ್ರದೇಶ, ರಾಜಸ್ಥಾನ, ಅಸ್ಸಾಂ, ಗೋವಾ, ಉತ್ತರಾಖಂಡ ಮತ್ತು ಚಂಡೀಗಢವನ್ನು ವಿ-ವಿಎಂಪಿಗಾಗಿ ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆಗೆ ಒಳಪಡಿಸಲಾಗಿದೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.
ವಾಹನ ಸ್ಕ್ರ್ಯಾಪೇಜ್ ನೀತಿ (V-VMP) ಏಪ್ರಿಲ್ 1, 2022 ರಿಂದ ಜಾರಿಗೆ ಬಂದಿದೆ. ಇದನ್ನು 2021-22ರ ಕೇಂದ್ರ ಬಜೆಟ್ನಲ್ಲಿ ಘೋಷಿಸಲಾಗಿತ್ತು. ಈ ನೀತಿ ಅಡಿ ವೈಯಕ್ತಿಕ ವಾಹನಗಳಿಗೆ 20 ವರ್ಷಗಳ ನಂತರ ಫಿಟ್‌ನೆಸ್ ಪರೀಕ್ಷೆಗಳನ್ನು ಒದಗಿಸುತ್ತದೆ, ಆದರೆ ವಾಣಿಜ್ಯ ವಾಹನಗಳಿಗೆ 15 ವರ್ಷಗಳು ಪೂರ್ಣಗೊಂಡ ನಂತರ ಇದು ಅಗತ್ಯವಿರುತ್ತದೆ.