ಶಿವಮೊಗ್ಗ : ಶಿವಮೊಗ್ಗದಲ್ಲಿ ಆಟವಾಡುತ್ತಿದ್ದ 11 ತಿಂಗಳ ಮಗುವೊಂದು ಜೀವಂತ ಮೀನು ನುಂಗಿರುವ ಘಟನೆ ನಡೆದಿದೆ.
ಶಿವಮೊಗ್ಗದಲ್ಲಿ ಆಟವಾಡುತ್ತಿದ್ದ ವೇಳೆ ಜೀವಂತ ಮೀನು ನುಂಗಿದ ಮಗುವಿನ ಜೀವವನ್ನು ವೈದ್ಯರು ಉಳಿಸಿದ್ದಾರೆ. ಮನೆಯಲ್ಲಿ ಸಾಕಿದ್ದ ಜಿಲೇಬಿ ಹೆಸರಿನ ಮೀನನ್ನು ಪ್ರತೀಕ್ ಎಂಬ ಮಗು ಜೀವಂತವಾಗಿ ನುಂಗಿದ್ದು, ಈ ವೇಳೆ ಗಂಟಲಿನಲ್ಲಿ ಮೀನು ಸಿಲುಕಿಕೊಂಡು ಮಗು ಸಾವು ಬದುಕಿನ ನಡುವೆ ಹೋರಾಟ ನಡೆಸಿತ್ತು. ಈ ವೇಳೆ ವೈದ್ಯರು ಮಗುವಿನ ಗಂಟಲಿನಲ್ಲಿ ಸಿಲುಕಿದ್ದ ಮೀನನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಮೊಗ್ಗದ ಸರ್ಜಿ ಖಾಸಗಿ ಅಸ್ಪತ್ರೆಯ ವೈದ್ಯರು ಮಗುವಿನ ಗಂಟಲಿನಲ್ಲಿ ಸಿಲುಕಿದ್ದ ಮೀನನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ.