ಕೊಲ್ಕತ್ತ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಸಿಡಿಲು ಬಡಿದು ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ.
ಮಾನ್ಸೂನ್ ಪ್ರಾರಂಭವಾಗುವ ಮುನ್ನ ಗುರುವಾರ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಮಳೆಯಾಗಿದೆ. ಮಾಲ್ದಾ ಮತ್ತು ಮುರ್ಷಿದಾಬಾದ್ ಪ್ರದೇಶಗಳು ಇಂದು ಮಧ್ಯಾಹ್ನ ಪಶ್ಚಿಮ ಬಂಗಾಳದ ಕಲ್ ಬೈಶಾಖಿ ಎಂಬ ಋತುಮಾನದ ಚಂಡಮಾರುತಕ್ಕೆ ಸಾಕ್ಷಿಯಾಗಿದೆ.
ಸಿಡಿಲಿಂದ ಮೃತಪಟ್ಟವರನ್ನು ಚಂದನ್ ಸಾಹ್ನಿ(40), ರಾಜ್ ಮೃಧಾ(16), ಮನೋಜಿತ್ ಮಂಡಲ್(21), ಅಸಿತ್ ಸಹಾ(19), ಸುಮಿತ್ರಾ ಮಂಡಲ್(46), ಪಂಕಜ್ ಮಂಡಲ್(23), ನಯನ್ ರಾಯ್(23), ಪ್ರಿಯಾಂಕಾ ಸಿಂಗ್(20), ರಾಣಾ ಶೇಖ್(8), ಅತುಲ್ ಮಂಡಲ್(65) ಮತ್ತು ಸಬರುಲ್ ಶೇಖ್ (11) ಎಂದು ಗುರುತಿಸಲಾಗಿದೆ.
ಅವರಲ್ಲಿ ರಾಣಾ ಶೇಖ್ ಮತ್ತು ಸಬರುಲ್ ಶೇಖ್ ಮಾಣಿಕ್ಚಕ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಗಳು. ಇತರ ಮೂವರು ಮಾಲ್ಡಾ ಪೊಲೀಸ್ ಠಾಣೆ ವ್ಯಾಪ್ತಿಯ ಸಹಾಪುರದವರು.
ಹರಿಶ್ಚಂದ್ರಪುರದಲ್ಲಿ ದಂಪತಿಗಳು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಮೃತರು ಗಜೋಲ್ ಪೊಲೀಸ್ ಠಾಣೆ ವ್ಯಾಪ್ತಿಯ ಆದಿನಾ ಮತ್ತು ರಟುವಾ ಪೊಲೀಸ್ ಠಾಣೆ ವ್ಯಾಪ್ತಿಯ ಬಾಲುಪುರದವರು. ಉಳಿದ ಇಬ್ಬರು ಇಂಗ್ಲಿಷ್ ಬಜಾರ್ ಮತ್ತು ಮಾಣಿಕ್ಚಕ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಗಳಾಗಿದ್ದಾರೆ.