alex Certify 11 ಮಕ್ಕಳಿದ್ದರೂ ವೃದ್ಧೆಗಿಲ್ಲ ಆಸರೆ; ದಯಾಮರಣಕ್ಕೆ ಮನವಿ ಸಲ್ಲಿಸಿದ 78 ವರ್ಷದ ಹಿರಿಯ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

11 ಮಕ್ಕಳಿದ್ದರೂ ವೃದ್ಧೆಗಿಲ್ಲ ಆಸರೆ; ದಯಾಮರಣಕ್ಕೆ ಮನವಿ ಸಲ್ಲಿಸಿದ 78 ವರ್ಷದ ಹಿರಿಯ ಮಹಿಳೆ

ಮಕ್ಕಳನ್ನು ತಂದೆ – ತಾಯಿ ಪ್ರೀತಿಯಿಂದ ಸಾಕಿ ಸಲಹುತ್ತಾರೆ. ಅವರು ಪ್ರಾಪ್ತ ವಯಸ್ಕರಾಗುವವರೆಗೂ ಅವರುಗಳ ಬೇಕು – ಬೇಡಗಳಿಗೆ ಸ್ಪಂದಿಸುತ್ತಾರೆ. ಆದರೆ ಅದೇ ಮಕ್ಕಳು ತಂದೆ – ತಾಯಿ ವೃದ್ಧಾಪ್ಯ ತಲುಪಿದ ವೇಳೆ ಅವರನ್ನು ಕಡೆಗಣಿಸುತ್ತಾರೆ.

ಇಂತಹುದೇ ಒಂದು ಪ್ರಕರಣ ಹಾವೇರಿ ಜಿಲ್ಲೆಯಲ್ಲಿ ನಡೆದಿದ್ದು, 11 ಜನ ಮಕ್ಕಳಿದ್ದರೂ ತನ್ನನ್ನು ಯಾರೂ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು 78 ವರ್ಷದ ವೃದ್ಧೆಯೊಬ್ಬರು ದಯಾಮರಣಕ್ಕೆ ಅವಕಾಶ ಕೋರಿದ್ದಾರೆ.

ರಾಣೆಬೆನ್ನೂರು ನಗರದ ನಿವಾಸಿ ಪುಟ್ಟವ್ವ ಕೊಟ್ಟೂರು ಎಂಬವರು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಈ ಮನವಿ ಸಲ್ಲಿಸಿದ್ದು, ಮಕ್ಕಳು ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಜೊತೆಗೆ ಪತಿ ಆಸ್ತಿಯಲ್ಲೂ ಪಾಲು ನೀಡಿಲ್ಲ. ಹೀಗಾಗಿ ಜೀವನವೇ ಸಾಕಾಗಿ ಹೋಗಿದೆ. ದಯಾಮರಣಕ್ಕೆ ಅವಕಾಶ ಮಾಡಿಕೊಡಿ ಎಂದು ಮನವಿ ಸಲ್ಲಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...