
ಬೆಂಗಳೂರು: ಕೆಇಎ ಪರೀಕ್ಷೆಯಲ್ಲಿ ಅಕ್ರಮ ನಡೆದ ಪ್ರಕರಣ ಬೆಳಕಿಗೆ ಬಂದಿದ್ದ ಬೆನ್ನಲ್ಲೇ ಈಗ 108 ಆಂಬುಲೆನ್ಸ್ ಚಾಲಕರ ನೇಮಕಾತಿಯಲ್ಲಿಯೂ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಆಂಬುಲೆನ್ಸ್ ಚಾಲಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ರಾಜ್ಯ ಅಂಬುಲೆನ್ಸ್ ಚಾಲಕರ ಸಂಘ ಜಿವಿಕೆ ಕಂಪನಿ ವಿರುದ್ಧ ಆರೋಪ ಮಾಡಿದೆ. 108 ಆಂಬುಲೆನ್ಸ್ ಗೆ 250ಕ್ಕೂ ಹೆಚ್ಚು ಅರ್ಹತೆ ಇಲ್ಲದ ಚಾಲಕರನ್ನು ನೇಮಕ ಮಾಡಲಾಗಿದೆ. ಜಿವಿಕೆ ಕಂಪನಿ ಸರ್ಕಾರದ ಆದೇಶ ಧಿಕ್ಕರಿಸಿ ಒಬ್ಬೊಬ್ಬರಿಂದ 3 ಲಕ್ಷ ರೂಪಾಯಿ ಹಣ ಪಡೆದು ನೇಮಕ ಮಾಡಿಕೊಂಡಿದೆ ಎಂದು ಆರೋಪಿಸಿದೆ.
ಅರ್ಹತೆ ಇಲ್ಲದ ಚಾಲಕರ ನೇಮಕತಿಯಿಂದಾಗಿಯೇ ಆಂಬುಲೆನ್ಸ್ ಅಪಘಾತಗಳ ಸಂಖ್ಯೆ ಏರಿಕೆಯಾಗಿದೆ. ಒಂದೇ ತಿಂಗಳಲ್ಲಿ 10ಕ್ಕೂ ಹೆಚ್ಚು ಆಂಬುಲೆನ್ಸ್ ಅಪಘಾತಗಳು ಸಂಭವಿಸಿವೆ ಎಂದು ಚಾಲಕರ ಸಂಘ ಆರೋಪಿಸಿದೆ.