ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇತ್ತೀಚೆಗೆ, ಶತಾಯುಷಿಯಾದ ಲೂಸಿಯಾನದ ಜೂಲಿಯಾ ಹಾಕಿನ್ಸ್ ಎಂಬುವವರು ಸೀನಿಯರ್ ಗೇಮ್ಸ್‌ನಲ್ಲಿ ಹೊಸ ವಿಶ್ವ ದಾಖಲೆ ಬರೆದಿದ್ದಾರೆ.
ಕುತೂಹಲಕಾರಿ ಅಂಶವೆಂದ್ರೆ 105 ವಯಸ್ಸಿನ ಹಾಕಿನ್ಸ್ ತನ್ನ ಪ್ರಯತ್ನದಿಂದ ತೃಪ್ತಿ ಹೊಂದಲಿಲ್ಲ ಬದಲಾಗಿ ಮತ್ತಷ್ಟು ವೇಗವಾಗಿ ಓಡುವ ಹಂಬಲವನ್ನು ವ್ಯಕ್ತಪಡಿಸಿದ್ದಾರೆ.
ಜೂಲಿಯಾ ಹಾಕಿನ್ಸ್ ಅವರ ಹೊಸ ದಾಖಲೆಯು ತನ್ನ ವಯಸ್ಸಿನ ವಿಭಾಗದಲ್ಲಿ 100 ಮೀ. ಓಟದಲ್ಲಿ ವಿಶ್ವ ದಾಖಲೆಯನ್ನು ನಿರ್ಮಿಸಿದ ಮೊದಲ ಮಹಿಳಾ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. 100 ಮೀ. ಓಟವನ್ನು ಅವರು 30:62 ಸಮಯದೊಂದಿಗೆ ಗುರಿ ತಲುಪಿದ್ದಾರೆ.
ನಿವೃತ್ತ ಶಿಕ್ಷಕಿಯಾಗಿರುವ, ಹಾಕಿನ್ಸ್ ತನ್ನ 101ನೇ ವಯಸ್ಸಿನಲ್ಲಿ ಓಟವನ್ನು ಪ್ರಾರಂಭಿಸಿದ್ದಾರೆ. ಆದರೆ, ಅವರು 80 ವರ್ಷದವಳಿದ್ದಾಗ ರಾಷ್ಟ್ರೀಯ ಹಿರಿಯ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ ನಂತರ ಅಥ್ಲೆಟಿಕ್ಸ್‌ಗೆ ಅಪರಿಚಿತರಾಗಿರಲಿಲ್ಲ. ಅವರು ಸೈಕ್ಲಿಂಗ್ ಟೈಮ್ ಟ್ರಯಲ್ಸ್‌ನಲ್ಲಿ ಪರಿಣತಿ ಹೊಂದಿದ್ದರು ಮತ್ತು ಹಲವಾರು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ತನ್ನ ಸೈಕ್ಲಿಂಗ್ ವೃತ್ತಿಜೀವನವನ್ನು ಕೊನೆಗೊಳಿಸಿದ ನಂತರ, ಅವರು 2017 ರಲ್ಲಿ ಓಟವನ್ನು ಪ್ರಾರಂಭಿಸಿದ್ದಾರೆ.
ತಾನು ಮತ್ತಷ್ಟು ಓಡಲು ಇಷ್ಟಪಡುತ್ತೇನೆ ಮತ್ತು ಇತರರಿಗೆ ಸ್ಫೂರ್ತಿಯಾಗಲು ಇಷ್ಟಪಡುವುದಾಗಿ ಹಾಕಿನ್ಸ್ ಹೇಳಿದ್ದಾರೆ. ನೀವು ವಯಸ್ಸಾದಂತೆ ಆರೋಗ್ಯಕರ ಮತ್ತು ಸಂತೋಷವಾಗಿರಲು ಬಯಸಿದರೆ ನೀವು ಸಕ್ರಿಯವಾಗಿರಬೇಕು ಎಂಬುದು ಇತರರಿಗೆ ನನ್ನ ಸಂದೇಶವಾಗಿದೆ ಎಂದು ಅವರು ಹೇಳಿದ್ದಾರೆ.