103 ವರ್ಷ ವಯಸ್ಸಿನ ವೃದ್ಧೆಯೊಬ್ಬರು ಪ್ರತಿದಿನ 12 ಗಂಟೆಗಳಿಗೂ ಹೆಚ್ಚು ಕಾಲ ಹತ್ತಿ ಕೀಳುತ್ತಿದ್ದ ಅನುಭವವನ್ನು ಬಹಿರಂಗಪಡಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಗೆದ್ದಿದ್ದಾರೆ ಮತ್ತು ವೈರಲ್ ಸ್ಟಾರ್ ಆಗಿದ್ದಾರೆ.
ಶತಾಯುಷಿ ಮೇಡಿ ಸ್ಕಾಟ್ ಅವರ ಮೊಮ್ಮಗಳು ಶಾನಿಕಾ ಬ್ರಾಡ್‌ಶಾ ಅವರು ಇತ್ತೀಚೆಗೆ ಟಿಕ್‌ಟಾಕ್ ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ತನ್ನ ಮೊಮ್ಮಗಳ ಜೊತೆ ಮಾತನಾಡುತ್ತಾ, ತಾನು ಚಿಕ್ಕವಳಿದ್ದಾಗ ಕೇವಲ 50 ಸೆಂಟ್ಸ್ ಹತ್ತಿಯನ್ನು ತೆಗೆಯುತ್ತಿದ್ದ ಅನುಭವವನ್ನು ಹಂಚಿಕೊಂಡಿದ್ದಾರೆ.
ಹಲವು ವರ್ಷಗಳಿಂದ ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡಿದರೂ ತಾನು ಕೇವಲ 100 ಡಾಲರ್ ಗಳಿಸಲಾಗಲಿಲ್ಲ ಎಂದು ಮೇಡಿ ವಿಡಿಯೋದಲ್ಲಿ ಬಹಿರಂಗಪಡಿಸಿದ್ದಾರೆ. ಅವರ ಕೆಲಸವು ಬೆಳಿಗ್ಗೆ 3 ಗಂಟೆಗೆ ಪ್ರಾರಂಭವಾದ್ರೆ ಸಂಜೆ 5 ಗಂಟೆಗೆ ಕೊನೆಗೊಳ್ಳುತ್ತಿತ್ತಂತೆ. ದಿನದ ಗಳಿಕೆ 50 ಸೆಂಟ್ಸ್ ಯಾವತ್ತೂ ದಾಟಿಲ್ಲ ಎಂಬುದಾಗಿ ಹೇಳಿದ್ದಾರೆ.
‘ಅನ್ನಭಾಗ್ಯ ಯೋಜನೆ’ ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್: ಜನವರಿಯಿಂದ ಸಾರವರ್ಧಿತ ಅಕ್ಕಿ ವಿತರಣೆ
ನಾವು ಕ್ರಿಸ್ಟೋಫರ್ ಕೊಲಂಬಸ್ ಬಗ್ಗೆ ಕೇಳುತ್ತೇವೆ. ಆದರೆ, ಕಪ್ಪು ಜನರ ಇತಿಹಾಸದ ಬಗ್ಗೆ ಹೆಚ್ಚು ಕೇಳುವುದಿಲ್ಲ. ಹಾಗಾಗಿ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಆದ್ದರಿಂದ ಜನರು, ಕಪ್ಪು ಜನರ ಕಷ್ಟಗಳ ಬಗ್ಗೆ ನೇರವಾಗಿ ಕೇಳಬಹುದು ಎಂದು ಮೊಮ್ಮಗಳು ಬ್ರಾಡ್‌ಶಾ ತಿಳಿಸಿದ್ದಾರೆ.
ಟಿಕ್ ಟಾಕ್ ನಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋವನ್ನು 2 ಮಿಲಿಯನ್ ವೀಕ್ಷಣೆ ಪಡೆದಿದ್ದು, 20,000 ಕಾಮೆಂಟ್‌ಗಳಿಂದ ತುಂಬಿದೆ. ತನ್ನ ಕುಟುಂಬವನ್ನು ಬೆಂಬಲಿಸಿದ ಕಪ್ಪು ಮಹಿಳೆಯಾಗಿ ತನ್ನ ದೃಷ್ಟಿಕೋನವನ್ನು ಹಂಚಿಕೊಂಡಿದ್ದಕ್ಕಾಗಿ ಟಿಕ್ ಟಾಕರ್ ಗಳು ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಹಳೆಯ ಆಟಿಕೆಯನ್ನು ಎಸೆಯುವ ಬದಲು ಹೀಗೆ ಮಾಡಿ
ಡಿಸೆಂಬರ್ 8 ರಂದು 104ನೇ ವರ್ಷಕ್ಕೆ ಕಾಲಿಡಲಿರುವ ಶತಾಯುಷಿಯು ತನ್ನ 12 ನೇ ವಯಸ್ಸಿನಲ್ಲಿ ಹತ್ತಿ ಹೊಲಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದರು. ಆಕೆ 16 ವರ್ಷದವರಾಗಿದ್ದಾಗ ಕುಟುಂಬ ಕೃಷಿ ಭೂಮಿಯಲ್ಲಿ ದುಡಿಯಲು ಮಿಯಾಮಿಗೆ ತೆರಳಿದ್ದರು.
ಶೇರ್‌ಕ್ರಾಪರ್ ಆಗಿ ಕಾರ್ಯನಿರ್ವಹಿಸಿದ ನಂತರ, ಮೇಡಿ ಮಿಯಾಮಿ ಬೀಚ್‌ನಲ್ಲಿ ಅಡುಗೆಯವರಾಗಿ ಕೆಲಸ ಮಾಡಿದ್ದಾರೆ. ನಂತರ ದಾದಿಯಾಗಿಯೂ ಕೆಲಸ ಮಾಡಿದ್ದಾರೆ. ಅವರು ತಮ್ಮ ಜೀವನದ 40 ವರ್ಷಗಳನ್ನು ಕುಟುಂಬದ ಸೇವೆಯಲ್ಲಿ ಕಳೆದಿದ್ದಾರೆ. ಅಂತಿಮವಾಗಿ 1989 ರಲ್ಲಿ ಕೆಲಸಕ್ಕೆ ಪೂರ್ಣವಿರಾಮ ಹಾಕಿದ್ದಾರೆ.
https://www.youtube.com/watch?v=TrK-IpgQe0U&t=108s