alex Certify 100 ಮೀಟರ್ ಓಟದ ಸ್ಪರ್ಧೆಯಲ್ಲಿ ಸೀರೆಯುಟ್ಟು ಓಡಲಿದ್ದಾರೆ 102 ವರ್ಷದ ಅಜ್ಜಿ; ಫಿಟ್ನೆಸ್ ಗೆ ಇವರೇ ಮಾದರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

100 ಮೀಟರ್ ಓಟದ ಸ್ಪರ್ಧೆಯಲ್ಲಿ ಸೀರೆಯುಟ್ಟು ಓಡಲಿದ್ದಾರೆ 102 ವರ್ಷದ ಅಜ್ಜಿ; ಫಿಟ್ನೆಸ್ ಗೆ ಇವರೇ ಮಾದರಿ

ವಯಸ್ಸು ಎಂಬುದು ಕೇವಲ ನಂಬರ್ ಅಷ್ಟೇ ಎಂದು ನಾವು ಕೇಳಿದ್ದೇವೆ. ಸಾಧಿಸುವ ಹಂಬಲವಿದ್ದವರಿಗೆ ಅಥವಾ ಬದುಕಿನಲ್ಲಿ ಛಲವಿದ್ದವರಿಗೆ ವಯಸ್ಸಾಗುವುದಿಲ್ಲ. ಅವರು ಯಾವಾಗಲೂ ಏನನ್ನಾದರೂ ಸಾಧಿಸಲು ಹಂಬಲಿಸುತ್ತಿರುತ್ತಾರೆ. ಅಂಥವರ ಸಾಲಿಗೆ ಉತ್ತರಪ್ರದೇಶ ವಾರಣಾಸಿಯ 102 ವರ್ಷದ ಕಲಾವತಿ ಸೇರುತ್ತಾರೆ. ಇಂತಹ ಇಳಿವಯಸ್ಸಿನಲ್ಲೂ ಅವರು ಮುಂಬರುವ ಸಂಸದ್ ಖೇಲ್ ಪ್ರತಿಯೋಗಿತಾ ಕಾಶಿ-2023 ರಲ್ಲಿ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಲು ಸ್ವತಃ ನೋಂದಾಯಿಸಿಕೊಂಡಿದ್ದಾರೆ.

ಕ್ರೀಡೆಯನ್ನು ಉತ್ತೇಜಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಯತ್ನಗಳಿಂದ ಸ್ಫೂರ್ತಿ ಪಡೆದ ಅವರು ಅಕ್ಟೋಬರ್ 16 ಮತ್ತು ನವೆಂಬರ್ 5 ರ ನಡುವೆ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಸೀರೆಯುಟ್ಟು ಬೂಟು ಧರಿಸಿ ಕಲಾವತಿ ಪ್ರತಿ ದಿನ ಬೆಳಗ್ಗೆ ವಾಕಿಂಗ್ ಹೋಗುತ್ತಾರೆ. ತಮ್ಮ ಫಿಟ್ ನೆಸ್ ಬಗ್ಗೆ ಗಮನ ಹರಿಸುವ ಅವರು ಹಲವರಿಗೆ ಮಾದರಿಯಾಗಿದ್ದಾರೆ.

1921 ರಲ್ಲಿ ರೈತರ ಕುಟುಂಬದಲ್ಲಿ ಜನಿಸಿದ ಕಲಾವತಿ ಅವರು 10 ನೇ ವಯಸ್ಸಿನಲ್ಲಿ ವಿವಾಹವಾದರು. ಆದರೆ ವೈವಾಹಿಕ ಜೀವನದ 20 ವರ್ಷಗಳ ಬಳಿಕ ತನ್ನ ಪತಿಯಿಂದ ದೂರವಾಗಿ ತಂದೆ ಮತ್ತು ಸಹೋದರನೊಂದಿಗೆ ಉಳಿಯಲು ತವರು ಮನೆಗೆ ತಮ್ಮ 31 ನೇ ವಯಸ್ಸಿನಲ್ಲಿ ವಾಪಸ್ಸಾಗ್ತಾರೆ.

ತನ್ನ ತಂದೆಗೆ ಹೊರೆಯಾಗಲು ಇಷ್ಟಪಡದ ಕಲಾವತಿ ವಾರಣಾಸಿಯ ಶಿವಪುರ ಪ್ರದೇಶದಲ್ಲಿ ತನ್ನ ಕುಟುಂಬದ ತೋಟ ನೋಡಿಕೊಳ್ಳಲು ಪ್ರಾರಂಭಿಸುತ್ತಾರೆ. ಕಲಾವತಿ ಇಂದಿಗೂ ತಮ್ಮ ಮನೆಯ ಮೇಲ್ಛಾವಣಿಗೆ ಹೋಗಲು ಪ್ರತಿದಿನ ಮೂರು ಮಹಡಿಗಳನ್ನು ಹತ್ತಾತ್ತಾರೆ ಎಂದು ಅವರ ಸೋದರ ಸೊಸೆ ಹೇಳುತ್ತಾರೆ.

“ಗಂಜಾರಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನ ಅಡಿಪಾಯವನ್ನು ಹಾಕಲು ಮೋದಿಜಿಯವರು ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ತುಂಬಾ ಪ್ರಭಾವಿತರಾಗಿದ್ದರು. ನಾವು ಕ್ರೀಡೆಯಲ್ಲಿ ಅವರ ಆಸಕ್ತಿಯನ್ನು ಗಮನಿಸಿ ಮತ್ತು ಅವರ ಫಿಟ್‌ನೆಸ್ ಅನ್ನು ಗಮನದಲ್ಲಿಟ್ಟುಕೊಂಡು ಎಸ್‌ಕೆಪಿಕೆ-2023 ರಲ್ಲಿ ಅವರು ಭಾಗವಹಿಸಲೆಂದು ಇಚ್ಚಿಸಿದೆವು ”ಎಂದು ಹೇಳಿದರು.

13 ವರ್ಷದಿಂದ ಪ್ರತಿದಿನ ಬೆಳಗ್ಗೆ ವಾಕಿಂಗ್ ಮಾಡುವ ಕಲಾವತಿ ಬೇರೆ ಯಾವುದೇ ವ್ಯಾಯಾಮಗಳನ್ನು ನಾನು ಮಾಡುವುದಿಲ್ಲ. ಪ್ರತಿ ದಿನ ನಡೆಯುತ್ತೇನೆ ಅಷ್ಟೇ ಎಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...