ಕೋರಿಕೆಗಳನ್ನು ಈಡೇರಿಸಿಕೊಳ್ಳುವ ಸಲುವಾಗಿ ಭಕ್ತರು ತಾವು ನಂಬಿದ ದೇವರ ಮೊರೆ ಹೋಗುತ್ತಾರೆ. ಅಲ್ಲದೆ ಇದಕ್ಕಾಗಿ ಹರಕೆಯನ್ನೂ ಹೊರುತ್ತಾರೆ. ಇನ್ನೂ ಕೆಲವರು ದೇವರಿಗೆ ವಿಶಿಷ್ಟ ರೀತಿಯಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಾರೆ.
ಇದೇ ರೀತಿ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹುನ್ನೂರು ಗ್ರಾಮದ ಭಕ್ತರೊಬ್ಬರು ಬರೋಬ್ಬರಿ 101 ಕೆಜಿ ತೂಕದ ಜೋಳದ ಚೀಲವನ್ನು ತಮ್ಮ ಬೆನ್ನಿನ ಮೇಲೆ ಹೊತ್ತು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟವನ್ನು ಏರಿದ್ದಾರೆ.
ರಾಯಪ್ಪ ದಫೇದಾರ ಎಂಬ ಈ ಭಕ್ತ ಅಂಜನಾದ್ರಿ ಬೆಟ್ಟದ 580 ಮೆಟ್ಟಿಲುಗಳನ್ನು 1 ಗಂಟೆ 10 ನಿಮಿಷಗಳ ಅವಧಿಯಲ್ಲಿ ಸರಾಗವಾಗಿ ಏರಿದ್ದು, ಬಳಿಕ ತಾವು ಹೊತ್ತು ತಂದ 101 ಕೆಜಿ ಜೋಳವನ್ನು ದೇವಸ್ಥಾನದ ದಾಸೋಹಕ್ಕೆ ಸಮರ್ಪಿಸಿದ್ದಾರೆ.