ಕೀವ್: ಉಕ್ರೇನ್ ವಿರುದ್ಧ 10ನೇ ದಿನ ದಾಳಿ ಮುಂದುವರೆಸಿರುವ ರಷ್ಯಾ ಸೇನೆ ತನ್ನ ಅಟ್ಟಹಾಸ ತೀವ್ರಗೊಳಿಸಿದೆ. ಈ ನಡುವೆ ಉಕ್ರೇನ್ ನಲ್ಲಿ ಸಿಲುಕಿದ್ದ 2,056 ಭಾರತೀಯರನ್ನು ಏರ್ ಲಿಫ್ಟ್ ಮಾಡಲಾಗಿದೆ. ಆದರೆ 1000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಯುದ್ಧ ಪೀಡಿತ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.
ಉಕ್ರೇನ್ ನ ಯುದ್ಧಪೀಡಿತ ಪ್ರದೇಶಗಳಾದ ಸುಮಿ ಹಾಗೂ ಖಾರ್ಕೀವ್ ನಗರಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಸುಮಿ ಪ್ರದೇಶವನ್ನು ಈಗಾಗಲೇ ರಷ್ಯನ್ ಸೇನೆ ಸುತ್ತುವರೆದಿದ್ದು, ಯಾರೂ ಹೊರಬರದಂತೆ ಕಟ್ಟಪ್ಪಣೆ ಮಾಡಿದೆ. ಆದರೆ ಸುಮಿಯಲ್ಲಿ 700 ಭಾರತೀಯರು ಸಿಲುಕಿಕೊಂಡಿದ್ದು, ಭಾರತಕ್ಕೆ ವಾಪಸ್ ಆಗಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
SHOCKING: ಹೊಲದಲ್ಲಿ ಪತ್ತೆಯಾದ್ಲು ಅರೆಬೆತ್ತಲಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಹುಡುಗಿ; ಹಿರಿಯ ವಿದ್ಯಾರ್ಥಿಯಿಂದಲೇ ರೇಪ್, ಬಲವಂತವಾಗಿ ವಿಷ ಕುಡಿಸಿ ಕೊಲೆ
ಇನ್ನು ಖಾರ್ಕೀವ್ ನಗರ ವಶಕ್ಕೆ ಪಡೆಯುವ ನಿಟ್ಟಿನಲ್ಲಿ ರಷ್ಯಾ ಭೀಕರ ಬಾಂಬ್ ದಾಳಿ, ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದ್ದು, ಖಾರ್ಕೀವ್ ಪ್ರದೇಶದಲ್ಲಿ 300 ಭಾರತೀಯರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ನಡುವೆ ಉಕ್ರೇನ್ ನಲ್ಲಿ ಸಿಲುಕಿದ್ದ 2,056 ಭಾರತೀಯರನ್ನು 10 ಐಎಎಫ್ ವಿಮಾನಗಳ ಮೂಲಕ ಏರ್ ಲಿಫ್ಟ್ ಮಾಡಲಾಗಿದ್ದು, ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರಿಗಾಗಿ 26 ಟನ್ ಆಹಾರ, ನೀರು ಅಗತ್ಯ ವಸ್ತುಗಳನ್ನು ವಿಮಾನಗಳ ಮೂಲಕ ರವಾನಿಸಲಾಗಿದೆ.