ಹಬ್ಬದ ಋತುವಿನ ಸಂಭ್ರಮಾಚರಣೆಯ ಸಂದರ್ಭದಲ್ಲಿ, ವಿಶ್ವದ ಅತಿದೊಡ್ಡ ಮೋಟಾರ್ಸೈಕಲ್ ಮತ್ತು ಸ್ಕೂಟರ್ಗಳ ತಯಾರಕರಾದ ಹೀರೋ ಮೊಟೊಕಾರ್ಪ್, ಅಕ್ಟೋಬರ್ 15 ರಿಂದ ದೇಶದಾದ್ಯಂತ ಹಾರ್ಲೆ-ಡೇವಿಡ್ಸನ್ X440 ವಿತರಣೆಯನ್ನು ಪ್ರಾರಂಭಿಸಿದೆ.
ಹಾರ್ಲೆ-ಡೇವಿಡ್ಸನ್ ಮತ್ತು ದೇಶದ ವಿವಿಧ ಭಾಗಗಳಲ್ಲಿ ಆಯ್ದ ಹೀರೋ ಮೋಟೋಕಾರ್ಪ್ ಔಟ್ಲೆಟ್ಗಳು ಸೇರಿದಂತೆ 100 ಡೀಲರ್ಶಿಪ್ಗಳಿಂದ ಹಾರ್ಲೆ-ಡೇವಿಡ್ಸನ್ X440 ಮೋಟಾರ್ಸೈಕಲ್ಗಳ ಮೆಗಾ ಡೆಲಿವರಿಗಳಾಗಿವೆ.
ಹಾರ್ಲೆ-ಡೇವಿಡ್ಸನ್ X440, ಉತ್ತರ ಭಾರತದ ರಾಜಸ್ಥಾನದ ನೀಮ್ರಾನಾ ದಲ್ಲಿರುವ ಹೀರೋ ಮೋಟೋಕಾರ್ಪ್ನ ಉತ್ಪಾದನಾ ಘಟಕದಲ್ಲಿ ತಯಾರಾಗುತ್ತದೆ – ಇದನ್ನು ಗಾರ್ಡನ್ ಫ್ಯಾಕ್ಟರಿ ಎಂದು ಕರೆಯಲಾಗುತ್ತದೆ.
ಜುಲೈ 2023 ರಲ್ಲಿ ಬಿಡುಗಡೆಯಾದಾಗಿನಿಂದಲೂ ಹಾರ್ಲೆ-ಡೇವಿಡ್ಸನ್ X440, ಭಾರತದಾದ್ಯಂತ ಪ್ರೀಮಿಯಂ ವಿಭಾಗದ ಗ್ರಾಹಕರನ್ನು ಆಕರ್ಷಿಸಿದ್ದು ಅದರ ಪ್ರದರ್ಶನದ ಕೇವಲ ಒಂದು ತಿಂಗಳೊಳಗೆ 25,000+ ಬುಕಿಂಗ್ಗಳನ್ನು ಗಳಿಸಿದೆ.
ಹೊಸ ಗ್ರಾಹಕರು ಈಗ ಹಾರ್ಲೆ-ಡೇವಿಡ್ಸನ್ X440 ಟೆಸ್ಟ್ ರೈಡ್ ಮಾಡಬಹುದು, ಎಲ್ಲ ಹಾರ್ಲೆ-ಡೇವಿಡ್ಸನ್ ಡೀಲರ್ಶಿಪ್ಗಳಲ್ಲಿ ವಾಹನವನ್ನು ಬುಕ್ ಮಾಡಬಹುದು ಮತ್ತು ದೇಶದಾದ್ಯಂತ ಯಾವುದೇ ಹೀರೊ ಮೋಟಾಕಾರ್ಪ್ ಔಟ್ಲೆಟ್ ಆಯ್ಕೆಮಾಡಿಕೊಳ್ಳಬಹುದು. ಆನ್ಲೈನ್ನಲ್ಲಿ ಮೋಟಾರ್ಸೈಕಲ್ ಬುಕ್ ಮಾಡಲು www.Harley-Davidsonx440.com ಭೇಟಿ ನೀಡಬಹುದಾಗಿದೆ.
ಮೋಟಾರ್ಸೈಕಲ್ ಮೂರು ರೂಪಾಂತರಗಳಲ್ಲಿ ಲಭ್ಯವಿದೆ – ಡೆನಿಮ್, ವಿವಿಡ್ ಮತ್ತು ಎಸ್. ಇವುಗಳ ಬೆಲೆಗಳು ಕ್ರಮವಾಗಿ: 2,39,500/- ರೂಗಳು (ಡೆನಿಮ್) , INR 2,59,500/- ರೂಗಳು (ವಿವಿಡ್) ಮತ್ತು INR 2,79,500/- ರೂಗಳು (S).