ಸ್ವೀಡನ್ ಕರಾವಳಿಯ ಅವಶೇಷಗಳಲ್ಲಿ 100 ಕ್ಕೂ ಹೆಚ್ಚು ಷಾಂಪೇನ್ ಬಾಟಲಿಗಳನ್ನು ಪತ್ತೆ ಮಾಡಲಾಗಿದೆ. 19 ನೇ ಶತಮಾನದ ನೌಕಾಯಾನ ಹಡಗಿನಲ್ಲಿ ಶಾಂಪೇನ್, ವೈನ್, ಖನಿಜಯುಕ್ತ ನೀರು ಮತ್ತು ಪಿಂಗಾಣಿಗಳು ಪತ್ತೆಯಾಗಿವೆ. ಇದನ್ನು ಆರಂಭದಲ್ಲಿ ಮೀನುಗಾರರ ದೋಣಿ ಎಂದು ನಂಬಲಾಗಿತ್ತು.
ಪೋಲಿಷ್ ಡೈವಿಂಗ್ ಗುಂಪಿನ ಬಾಲ್ಟಿಸೆಕ್‌ನ ಟೊಮಾಸ್ಜ್ ಸ್ಟಾಚುರಾ ಅವರು ರಷ್ಯಾದ ತ್ಸಾರ್‌ಗೆ ಇದನ್ನು ಸಾಗಿಸುವ ಉದ್ದೇಶವಿತ್ತು ಎಂದು ನಂಬುತ್ತಾರೆ. ಜೇಡಿಮಣ್ಣಿನ ನೀರಿನ ಬಾಟಲಿಗಳು ಜರ್ಮನ್ ಕಂಪನಿ ಸೆಲ್ಟರ್ಸ್‌ನ ಬ್ರಾಂಡ್ ಹೆಸರನ್ನು ಹೊಂದಿವೆ. ಈ ಹಡಗು 1850 ರಿಂದ 1867 ಮಧ್ಯದ್ದು ಎಂದು ನಂಬಲಾಗಿದೆ.
ಬಾಲ್ಟಿಕ್ ಪ್ರದೇಶದಲ್ಲಿ ನೌಕಾಘಾತಗಳ ಆವಿಷ್ಕಾರದಲ್ಲಿ ಪರಿಣತಿ ಹೊಂದಿರುವ ಬಾಲ್ಟಿಕ್ಟೆಕ್ ಕಂಪನಿಯು ಇದನ್ನು ಆವಿಷ್ಕಾರ ಮಾಡಿದೆ. ಇದಕ್ಕೆ ನಿಧಿ ಎಂದು ಕರೆಯಲಾಗಿದೆ. 150 ವರ್ಷಗಳ ಕಾಲ ಶಾಂಪೇನ್ ಹಾಳಾಗದೆ ಇಡಬೇಕು ಅಂದ್ರೆ ಅದಕ್ಕೆ ಸಮುದ್ರ ಉತ್ತಮ ಜಾಗ ಎಂದು ತಂಡದ ನಾಯಕ ಸ್ಟಾಚುರಾ ಹೇಳಿದ್ದಾರೆ. ಸ್ಟಾಚುರಾ 40 ವರ್ಷಗಳಿಂದ ಡೈವಿಂಗ್ ಮಾಡ್ತಿದ್ದು, ಒಂದು ಎರಡು ಬಾಟಲಿ ಸಿಗುತ್ತಿತ್ತು. ಆದ್ರೆ ಇಷ್ಟುದೊಡ್ಡ ಮಟ್ಟದಲ್ಲಿ ಶಾಂಪೆನ್ ಬಾಟಲಿ ಸಿಗುತ್ತೆ ಎಂದು ಊಹಿಸಿರಲಿಲ್ಲ. ಆ ಜಾಗದಲ್ಲಿ ಎರಡು ಗಂಟೆಯೂ ಡೈವಿಂಗ್ ಸಾಧ್ಯವಿರಲಿಲ್ಲ. ಅನುಮಾನ ಬಂದು ಹುಡುಕಾಟ ಶುರು ಮಾಡಿದ್ದೆವು ಎಂದು ಅವರು ಹೇಳಿದ್ದಾರೆ. ಈ ಆವಿಷ್ಕಾರವನ್ನು ಸ್ವೀಡಿಷ್ ದ್ವೀಪದ ಓಲ್ಯಾಂಡ್‌ನ ದಕ್ಷಿಣಕ್ಕೆ ಸುಮಾರು 37 ಕಿಮೀ ದೂರದವರೆಗೆ ಮಾಡಲಾಗಿದೆ.