ಶ್ರೀಲಂಕಾದ ಯುವ ಗಾಯಕಿ ಯೊಹಾನಿ ಡಿಲೊಕಾ ಡಿ ಸಿಲ್ವಾ ಕಂಡದಲ್ಲಿ ಮೂಡಿಬಂದಿರುವ ಲಂಕಾದ ಸಿಂಹಳಿ ಭಾಷೆಯ ’ಮನಿಕೆ ಮಗೆ ಹಿತೆ’ ಗೀತೆ ವಿಶ್ವಾದ್ಯಂತ ಜನರ ಮನಸ್ಸು ಸೂರೆಗೊಳಿಸಿದೆ. ಸಣ್ಣ ಮಕ್ಕಳಿಂದ ಹಿಡಿದು ವೃದ್ಧರ ಮನದಲ್ಲೂ ಕೂಡ ಮಗೆ ಹಿತೇಗೆ ವಿಶೇಷ ಸ್ಥಾನ ಲಭಿಸಿದೆ. ಅನೇಕರು ತಮ್ಮ ಸ್ಥಳೀಯ ಪ್ರಾದೇಶಿಕ ಭಾಷೆಯಲ್ಲಿ ಈ ಗೀತೆಯನ್ನು ಹಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಜನಪ್ರಿಯರಾಗಿದ್ದಾರೆ ಕೂಡ.
ಆದರೆ, ಇತ್ತೀಚೆಗೆ 10 ವರ್ಷದ ಬಾಲಕ ಗಿಟಾರ್ ಹಿಡಿದು ಮನಿಕೆ ಮಗೆ ಹಿತೇ ಎಂದು ಹಾಡಿರುವ ಮುದ್ದಾದ ವಿಡಿಯೊ ಭಾರಿ ವೈರಲ್ ಆಗಿದೆ. ಆ ಬಾಲಕನ ಹೆಸರು ವಿವಾನ್ ಮೆನನ್ ಎಂದು. ಇಂಗ್ಲಿಷ್ ಫ್ರೆಂಡ್ಶಿಪ್ ಆವೃತ್ತಿ ಮತ್ತು ಸಿಂಹಳಿ ಭಾಷೆಯ ಮನಿಕೆ ಗೀತೆ ಎರಡನ್ನೂ ಮಿಶ್ರಣ ಮಾಡಿ ಆತ ರಾರಯಪ್ ಶೈಲಿಯಲ್ಲೂ ಹಾಡಿದ್ದಾನೆ ಕೂಡ.
ವಿವಾಹ ನಡೆಯುವಾಗಲೇ ಕಿಸ್ ಮಾಡಿದ ವಧು-ವರ….!
ಇಂಪಾದ ಎಳೆಯ ಸ್ವರದಲ್ಲಿ ವಿವಾನ್ ಹಾಡನ್ನು ಆಲಿಸಿದವರು ತಲೆದೂಗುತ್ತಾ ಮೈಮರೆಯುತ್ತಿದ್ದಾರೆ. ಇನ್ಸ್ಟಾಗ್ರಾಂನ ‘ sing_n_explore ‘ಖಾತೆಯಲ್ಲಿ ವಿವಾನ್ ಗೀತೆಯ ವಿಡಿಯೊ ಪೋಸ್ಟ್ ಮಾಡಲಾಗಿದೆ.
ನಿನ್ನ ಸುಶ್ರಾವ್ಯ ಕಂಠಕ್ಕೆ ಮನಸೋತೆವು, ನಿನಗೆ ದೇವರು ಒಳ್ಳೆಯದು ಮಾಡಲಿ ಎಂದು ಅನೇಕ ನೆಟ್ಟಿಗರು ವಿವಾನ್ಗೆ ಮೆಚ್ಚುಗೆ ಸೂಚಿಸಿ ಬೆನ್ನುತಟ್ಟಿದ್ದಾರೆ.
https://youtu.be/RwJydNc1hfU