
BIG NEWS: ಸಿಎಂ ಯಡಿಯೂರಪ್ಪ ಭೋಜನ ಕೂಟ ದಿಢೀರ್ ಮುಂದೂಡಿಕೆ
ಫಿಲಡೆಲ್ಫಿಯಾ ಫಿಲ್ಲಿಸ್ ಹಾಗು ಷಿಕಾಗೋ ಕಬ್ಸ್ ನಡುವಿನ ಬೇಸ್‌ಬಾಲ್ ಪಂದ್ಯವೊಂದರ ವೇಳೆ ಪ್ರೇಕ್ಷಕರೊಂದಿಗೆ ಕುಳಿತಿದ್ದ 10 ವರ್ಷದ ಪೋರ ಆರನ್ ಪ್ರೆಸ್ಲೇ, ಆಲ್-ಸ್ಟಾರ್ ಆಟಗಾರನೊಬ್ಬ ಬಾರಿಸಿದ ಫೌಲ್ ಬಾಲ್ ಒಂದನ್ನು ಹಿಡಿತಕ್ಕೆ ಪಡೆಯಲು ಸಫಲನಾಗಿದ್ದಾನೆ. ನೆಲಕ್ಕೆ ಬಡಿದು ಬಂದ ಚೆಂಡನ್ನು ಹಿಡಿದ ಆರನ್‌ನ ಸಂತಸ ಹೇಳತೀರದಾಗಿತ್ತು.
ಇದೇ ವೇಳೆ ಚೆಂಡನ್ನು ಹಿಡಿಯಲು ವಿಫಲಳಾಗಿದ್ದಕ್ಕೆ ಬೇಜಾರು ಮಾಡಿಕೊಂಡು ಅಳುತ್ತಿದ್ದ ಬಾಲಕಿಯೊಬ್ಬಳನ್ನು ಪಕ್ಕದಲ್ಲೇ ಕಂಡ ಆರನ್, ಕೂಡಲೇ ಆಕೆಗೆ ಅದನ್ನು ಕೊಟ್ಟಿದ್ದಾನೆ.
ಬಾಲಕನ ಈ ಹೃದಯ ಸಿರಿವಂತಿಕೆಗೆ ನೆಟ್ಟಿಗ ಸಮುದಾಯ ಭೇಷ್ ಎಂದಿದೆ. ಬಾಲಕನ ಈ ನಡೆಗೆ ನೂರಾರುಮಂದಿ ಕಾಮೆಂಟ್ ಮಾಡಿ ಶ್ಲಾಘಿಸಿದ್ದಾರೆ.