ಶಿಕ್ಷಣವು ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಶಿಕ್ಷಣ ನಮಗೆ ವಿವಿಧ ಕ್ಷೇತ್ರಗಳಲ್ಲಿ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುತ್ತದೆ. ಕೆಲವು ಕೋರ್ಸ್ಗಳು ಬಹಳ ಕಷ್ಟಕರವಾಗಿರುತ್ತವೆ. ಕಠಿಣ ಪರಿಶ್ರಮ ಮತ್ತು ಸಮರ್ಪಿತ ವಿದ್ಯಾರ್ಥಿಗಳು ಮಾತ್ರ ಇಂತಹ ಕೋರ್ಸ್ಗಳನ್ನು ಪೂರ್ಣಗೊಳಿಸಬಹುದು. ವಿಶ್ವದ ಅತ್ಯಂತ ಕಷ್ಟಕರವಾದ 10 ಕೋರ್ಸ್ಗಳ ಪಟ್ಟಿ ಇಲ್ಲಿದೆ.
ಅರಿವಳಿಕೆ (ಅನಸ್ತೇಶಿಯಾ): ಇದು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಕೋರ್ಸ್. ರೋಗಿಗಳಿಗೆ ಅರಿವಳಿಕೆ ನೀಡುವುದರ ಮೇಲೆ ಕೇಂದ್ರೀಕರಿಸುತ್ತದೆ. ಶಸ್ತ್ರಚಿಕಿತ್ಸೆ ಮತ್ತು ಇತರ ವೈದ್ಯಕೀಯ ಪ್ರಕ್ರಿಯೆಯಲ್ಲಿ ಇದು ಅಗತ್ಯವಾಗಿದೆ. ಈ ವಿಭಾಗದಲ್ಲಿ ತಜ್ಞರಾಗಲು ಸಂಕೀರ್ಣ ಔಷಧಗಳು ಮತ್ತು ಕಾರ್ಯವಿಧಾನಗಳ ಜ್ಞಾನ ಅಗತ್ಯ. ರೋಗಿಗಳ ದೈಹಿಕ ಮತ್ತು ಮಾನಸಿಕ ಸ್ಥಿತಿಯ ಬಗ್ಗೆ ಕೂಡ ವಿವರವಾದ ತಿಳುವಳಿಕೆ ಬೇಕು.
ಆಸ್ಟ್ರೋಫಿಸಿಕ್ಸ್: ಇದು ಬ್ರಹ್ಮಾಂಡ, ಅದರ ಮೂಲ, ಅಭಿವೃದ್ಧಿ ಮತ್ತು ರಚನೆಯನ್ನು ಅಧ್ಯಯನ ಮಾಡುವ ವಿಜ್ಞಾನವಾಗಿದೆ. ಭೌತಶಾಸ್ತ್ರ, ಗಣಿತ ಮತ್ತು ಖಗೋಳಶಾಸ್ತ್ರ ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಜ್ಞಾನವನ್ನು ಇದು ಒಳಗೊಂಡಿರುತ್ತದೆ.
ಕಂಪ್ಯೂಟರ್ ಸೈನ್ಸ್: ಕಂಪ್ಯೂಟರ್ಗಳು ಮತ್ತು ಕಂಪ್ಯೂಟಿಂಗ್ ಸಿಸ್ಟಮ್ಗಳ ವಿನ್ಯಾಸ, ನಿರ್ಮಾಣ ಮತ್ತು ಕಾರ್ಯಾಚರಣೆಗೆ ಸಂಬಂಧಿಸಿದ ಕೋರ್ಸ್ ಇದು. ಪ್ರೋಗ್ರಾಮಿಂಗ್ ಭಾಷೆಗಳು, ಅಲ್ಗಾರಿದಮ್ಗಳು, ಡೇಟಾ ರಚನೆ ಮತ್ತು ಆಪರೇಟಿಂಗ್ ಸಿಸ್ಟಮ್ಗಳು ಸೇರಿದಂತೆ ವಿವಿಧ ವಿಷಯಗಳ ಜ್ಞಾನವನ್ನು ಒಳಗೊಂಡಿರುತ್ತದೆ.
ಎಂಜಿನಿಯರಿಂಗ್: ಎಂಜಿನಿಯರಿಂಗ್ ಬಗ್ಗೆ ಬಹುತೇಕ ಎಲ್ಲರಿಗೂ ತಿಳಿದಿದೆ. ವಿವಿಧ ರೀತಿಯ ರಚನೆಗಳು, ಯಂತ್ರಗಳು ಮತ್ತು ವ್ಯವಸ್ಥೆಗಳ ವಿನ್ಯಾಸ, ನಿರ್ಮಾಣ ಮತ್ತು ಕಾರ್ಯಾಚರಣೆಯೊಂದಿಗೆ ವ್ಯವಹರಿಸುತ್ತದೆ. ಭೌತಶಾಸ್ತ್ರ, ಗಣಿತ, ರಸಾಯನಶಾಸ್ತ್ರ ಮತ್ತು ಎಂಜಿನಿಯರಿಂಗ್ನ ವಿವಿಧ ನಿರ್ದಿಷ್ಟ ಕ್ಷೇತ್ರಗಳನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ವಿಷಯಗಳ ಜ್ಞಾನವನ್ನು ಒಳಗೊಂಡಿರುತ್ತದೆ.
ಗಣಿತ: ಗಣಿತ ಎಷ್ಟೋ ವಿದ್ಯಾರ್ಥಿಗಳ ಪಾಲಿಗೆ ಕಬ್ಬಿಣದ ಕಡಲೆಯಿದ್ದಂತೆ. ಸಂಖ್ಯೆಗಳು, ಮೊತ್ತ, ಗಾತ್ರಗಳು ಮತ್ತು ವ್ಯವಸ್ಥೆಗಳ ಅಧ್ಯಯನ ಇದಾಗಿದೆ. ಇದಕ್ಕೆ ಅಮೂರ್ತ ಪರಿಕಲ್ಪನೆಗಳು ಮತ್ತು ತತ್ವಗಳ ತಿಳುವಳಿಕೆ ಅಗತ್ಯವಿರುತ್ತದೆ.
ತತ್ವಶಾಸ್ತ್ರ: ಇದು ಸತ್ಯ, ಜ್ಞಾನ, ಅಸ್ತಿತ್ವ ಮತ್ತು ವಾಸ್ತವದ ಸ್ವರೂಪದಂತಹ ಪ್ರಶ್ನೆಗಳ ಅಧ್ಯಯನವಾಗಿದೆ. ಇದರಲ್ಲಿ ಸಂಕೀರ್ಣವಾದ ತಾತ್ವಿಕ ಪಠ್ಯಗಳನ್ನು ಅರ್ಥಮಾಡಿಕೊಳ್ಳುವ ಮತ್ತು ವಿಶ್ಲೇಷಿಸುವ ಅಗತ್ಯವಿದೆ. ಬಲವಾದ ತಾರ್ಕಿಕ ಚಿಂತನೆ ಮತ್ತು ಚರ್ಚೆಯ ಕೌಶಲ್ಯಗಳೂ ಬೇಕು.
ಭೌತಶಾಸ್ತ್ರ: ಇದು ಪ್ರಕೃತಿಯ ಮೂಲಭೂತ ನಿಯಮಗಳು, ವಸ್ತು ಮತ್ತು ಶಕ್ತಿಯ ನಡವಳಿಕೆಯ ಅಧ್ಯಯನವಾಗಿದೆ. ಇದಕ್ಕೆ ಸಂಕೀರ್ಣ ಗಣಿತದ ಸಮೀಕರಣಗಳನ್ನು ಅರ್ಥಮಾಡಿಕೊಳ್ಳಬೇಕು.
ಮನೋವಿಜ್ಞಾನ: ಇದು ಮಾನವನ ಮನಸ್ಸು ಮತ್ತು ನಡವಳಿಕೆಯ ಅಧ್ಯಯನವಾಗಿದೆ. ಇದನ್ನು ಕಲಿಯಲು ಆಲೋಚನೆ, ಭಾವನೆ ಮತ್ತು ನಡವಳಿಕೆಯಂತಹ ವಿಭಿನ್ನ ಮಾನಸಿಕ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳಬೇಕು. ಬಲವಾದ ಅವಲೋಕನ ಮತ್ತು ವಿಶ್ಲೇಷಣಾತ್ಮಕ ಕೌಶಲ್ಯಗಳ ಅಗತ್ಯವಿರುತ್ತದೆ.
ಸಂಗೀತ ಸಂಯೋಜನೆ: ಇದು ಸಂಗೀತವನ್ನು ರಚಿಸುವ ಮತ್ತು ಬರೆಯುವ ಪ್ರಕ್ರಿಯೆಯಾಗಿದೆ. ಸಂಗೀತ ಸಿದ್ಧಾಂತ, ಸಾಮರಸ್ಯ ಮತ್ತು ವಾದ್ಯವೃಂದ ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಜ್ಞಾನವನ್ನು ಇದು ಒಳಗೊಂಡಿದೆ. ಇದಕ್ಕೆ ಸೃಜನಶೀಲತೆ ಮತ್ತು ಕಲ್ಪನೆಯ ಅಗತ್ಯವಿರುತ್ತದೆ.
ಸ್ಟಾಟಿಸ್ಟಿಕ್ಸ್: ಇದು ಡೇಟಾ ಸಂಗ್ರಹಣೆ, ವಿಶ್ಲೇಷಣೆ, ವಿವರಣೆ ಮತ್ತು ಪ್ರಸ್ತುತಿಯೊಂದಿಗೆ ವ್ಯವಹರಿಸುತ್ತದೆ. ಇದಕ್ಕೆ ಗಣಿತದ ಸೂತ್ರಗಳು ಮತ್ತು ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಅನ್ವಯಿಸುವ ಅಗತ್ಯವಿರುತ್ತದೆ.