ನವದೆಹಲಿ : ಮಹಿಳೆಯರನ್ನು ಗರ್ಭಿಣಿ ಮಾಡಿದ್ರೆ 10 ಲಕ್ಷ ಬಹುಮಾನ ನೀಡಲಾಗುತ್ತದೆ ಎಂದು ಆಫರ್ ನೀಡಿ ವಂಚಿಸುತ್ತಿದ್ದ ಖತರ್ ನ್ಯಾಕ್ ಗ್ಯಾಂಗ್ ನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಪ್ರಿನ್ಸ್ ರಾಜ್, ಭೋಲಾ ಕುಮಾರ್ ಮತ್ತು ರಾಹುಲ್ ಕುಮಾರ್ ಎಂದು ಗುರುತಿಸಲಾಗಿದೆ. ಪುರುಷರನ್ನು ಆಕರ್ಷಿಸುತ್ತಿದ್ದ ಗ್ಯಾಂಗ್ ಅವರಿಂದ ಹಣವನ್ನು ಸುಲಿಗೆ ಮಾಡಿ ವಂಚಿಸುತ್ತಿತ್ತು.
ಸೈಬರ್ ಪೊಲೀಸ್ ಠಾಣೆಗೆ ಬಂದ ದೂರಿನ ಮೇರೆಗೆ ಬಲೆ ಬೀಸಲಾಗಿದ್ದು, ಮಕ್ಕಳಿಲ್ಲದ ಮಹಿಳೆಯರನ್ನು ಗರ್ಭಧರಿಸಲು ಗ್ರಾಹಕ ಶುಲ್ಕವಾಗಿ ಭಾರಿ ಮೊತ್ತವನ್ನು ನೀಡುವುದಾಗಿ ಭರವಸೆ ನೀಡಿ ಯುವಕರಿಗೆ ಆಮಿಷವೊಡ್ಡಿದ ಆರೋಪದ ಮೇಲೆ ಪ್ರಿನ್ಸ್ ರಾಜ್, ಭೋಲಾ ಕುಮಾರ್ ಮತ್ತು ರಾಹುಲ್ ಕುಮಾರ್ ಎಂಬ ಮೂವರನ್ನು ಬಂಧಿಸಲಾಗಿದೆ. ಅವರು ಈ ದಂಧೆಯನ್ನು ನಾದ್ರಿಗಂಜ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಕೌರಾ ಗ್ರಾಮದಿಂದ ನಡೆಸುತ್ತಿದ್ದರು.
ಹೇಗೆ ನಡೆಯುತ್ತಿತ್ತು ವಂಚನೆ..?
ವಂಚಕರ ತಂಡವೊಂದು ಆಲ್ ಇಂಡಿಯಾ ಪ್ರಗ್ನೆಂಟ್ ಜಾಬ್ ಸರ್ವೀಸ್ ಎಂಬ ಕೆಲಸದ ಆಫರ್ ನೀಡಿತ್ತು. ಮಕ್ಕಳಾದವರಿಗೆ ಲೈಂಗಿಕ ಸಂಪರ್ಕ ಬೆಳೆಸಿ ಅವರು ಗರ್ಭಧರಿಸುವಂತೆ ಮಾಡಬೇಕು. ಮಹಿಳೆಯರು ಗರ್ಭ ಧರಿಸಿದರೆ 1 ಲಕ್ಷ ರೂ ನೀಡಲಾಗುತ್ತದೆ, ಒಂದು ವೇಳೆ ವಿಫಲವಾದರೆ 50,000 ರೂ ನೀಡುತ್ತೇವೆ ಎಂದು ಭರವಸೆ ನೀಡಲಾಗಿತ್ತು.
ಜಾಹೀರಾತು ನೋಡಿ ಮರುಳಾದವರಿಂದ ಪಾನ್ ಕಾರ್ಡ್ ಇನ್ನಿತರ ಮಾಹಿತಿ ಪಡೆದು ಅವರಿಗೆ ಸುಂದರವಾದ ಫೋಟೋ ಕಳುಹಿಸಲಾಗುತ್ತಿತ್ತು . ನಂತರ ಹೋಟೆಲ್ ಖರ್ಚು, ಆ ಖರ್ಚು , ಈ ಖರ್ಚು ಎಂದು ಅವರಿಂದ ಹಣ ಪಡೆಯಲಾಗುತ್ತಿತ್ತು. ಹಣ ಸಂಗ್ರಹ ಮಾಡಿದ ಬಳಿಕ ಸಂಪರ್ಕ ಕಡಿತಗೊಳಿಸಲಾಗುತ್ತಿತ್ತು.
ಏತನ್ಮಧ್ಯೆ, ಮಧ್ಯಪ್ರದೇಶದ ಬಿಎಸ್ಎಫ್ನಲ್ಲಿ ನೇಮಕಗೊಂಡ 59 ವರ್ಷದ ಇನ್ಸ್ಪೆಕ್ಟರ್ ಸುಮಾರು ಒಂದು ತಿಂಗಳ ಕಾಲ ‘ಡಿಜಿಟಲ್ ಬಂಧನ’ಕ್ಕೆ ಒಳಗಾದ ನಂತರ 70 ಲಕ್ಷ ರೂ.ಗಿಂತ ಹೆಚ್ಚು ವಂಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಎಫ್ಐಆರ್ ಪ್ರಕಾರ, ಸೈಬರ್ ಅಪರಾಧ ವಿಭಾಗದ ಅಧಿಕಾರಿಗಳಂತೆ ನಟಿಸಿದ ಕೆಲವು ಅಪರಿಚಿತ ವ್ಯಕ್ತಿಗಳು ತನಗೆ 70,29,990 ರೂ.ಗಳನ್ನು ವಂಚಿಸಿದ್ದಾರೆ ಮತ್ತು ತನ್ನನ್ನು ಮತ್ತು ತನ್ನ ಕುಟುಂಬವನ್ನು ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತ ದೂರು ದಾಖಲಿಸಿದ್ದಾರೆ.