alex Certify ಸೌದಿ ವಿಮಾನ ನಿಲ್ದಾಣದಲ್ಲಿ ಸ್ಪೋಟಕಗಳಿದ್ದ ಡ್ರೋನ್ ದಾಳಿ: ವಿವಿಧ ದೇಶಗಳ 10 ಮಂದಿಗೆ ಗಾಯ, ನಿಲ್ದಾಣಕ್ಕೆ ಹಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೌದಿ ವಿಮಾನ ನಿಲ್ದಾಣದಲ್ಲಿ ಸ್ಪೋಟಕಗಳಿದ್ದ ಡ್ರೋನ್ ದಾಳಿ: ವಿವಿಧ ದೇಶಗಳ 10 ಮಂದಿಗೆ ಗಾಯ, ನಿಲ್ದಾಣಕ್ಕೆ ಹಾನಿ

ಕೈರೋ: ಸೌದಿ ದಕ್ಷಿಣ ನಗರ ಜಿಜಾನ್‌ನ ಕಿಂಗ್ ಅಬ್ದುಲ್ಲಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸ್ಫೋಟಕಗಳು ತುಂಬಿದ ಡ್ರೋನ್ ದಾಳಿ ನಡೆಸಲಾಗಿದ್ದು, 10 ಜನ ಗಾಯಗೊಂಡಿದ್ದಾರೆ ಎಂದು ಸೌದಿ ನೇತೃತ್ವದ ಒಕ್ಕೂಟದ ವಕ್ತಾರರನ್ನು ಉಲ್ಲೇಖಿಸಿ ರಾಜ್ಯ ಸುದ್ದಿ ಸಂಸ್ಥೆ(ಎಸ್‌ಪಿಎ) ಹೇಳಿದೆ.

ಆರು ಸೌದಿ ಪ್ರಜೆಗಳು, ಮೂವರು ಬಾಂಗ್ಲಾದೇಶಿ ಪ್ರಜೆಗಳು ಮತ್ತು ಒಬ್ಬ ಸುಡಾನ್ ಪ್ರಜೆ ಗಾಯಗೊಂಡಿದ್ದಾರೆ. ದಾಳಿಯಲ್ಲಿ ವಿಮಾನ ನಿಲ್ದಾಣದ ಕೆಲವು ಮುಂಭಾಗದ ಕಿಟಕಿಗಳು ಸಹ ಛಿದ್ರಗೊಂಡಿವೆ ಎಂದು ಒಕ್ಕೂಟದ ವಕ್ತಾರರು ತಿಳಿಸಿದ್ದಾರೆ.

2015 ರಲ್ಲಿ ಯೆಮೆನ್‌ನಲ್ಲಿ ಸೌದಿ ನೇತೃತ್ವದ ಸೇನಾ ಒಕ್ಕೂಟವು ಮಧ್ಯಪ್ರವೇಶಿಸಿತ್ತು. ಅಧ್ಯಕ್ಷ ಅಬ್‌ದ್ರಬ್ಬು ಮನ್ಸೂರ್ ಹಾದಿಯವರ ಉಚ್ಚಾಟಿತ ಸರ್ಕಾರದ ಪಡೆಗಳನ್ನು ಬೆಂಬಲಿಸಿತು. ಇರಾನ್ ಹೊಂದಿದ್ದ ಹೌತಿ ಗುಂಪಿನ ವಿರುದ್ಧ ಹೋರಾಡಿತು.

ಹೌತಿಗಳು ತಕ್ಷಣಕ್ಕೆ ಯಾವುದೇ ಹೊಣೆಗಾರಿಕೆ ಹೊತ್ತುಕೊಂಡಿಲ್ಲ. ಆದರೆ, ಗುಂಪು ನಿಯಮಿತವಾಗಿ ಗಲ್ಫ್ ಸಾಮ್ರಾಜ್ಯವನ್ನು ಗುರಿಯಾಗಿಸಿಕೊಂಡು ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...