ಜಯಪುರ:ಚಿಕ್ಕಮಗಳೂರು ಜಿಲ್ಲೆಯ ಜಯಪುರ ಬಿಜಿಎಸ್ ಸಮೂಹ ಸಂಸ್ಥೆಗಳ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ವಸಂತ್ ಬಿಜೆ ಇವರು ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ನಡೆದ 34 ನೇ ಘಟಿಕೋತ್ಸವದಲ್ಲಿ ಜ್ಞಾನಭಾರತಿ ಎಂ.ಎ ಕನ್ನಡ ವಿಭಾಗದಲ್ಲಿ RANK ಗಳಿಸುವ ಮೂಲಕ 10 ಸ್ವರ್ಣ ಪದಕ ಪಡೆದಿದ್ದಾರೆ.
ಉಪನ್ಯಾಸಕರ ಅಪರೂಪದ ಸಾಧನೆ ಎಲ್ಲಾ ವಿದ್ಯಾರ್ಥಿಗಳಿಗೂ ಆದರ್ಶವಾಗಿದ್ದು, ಇವರ ಈ ಸಾಧನೆಗೆ ಪೂಜ್ಯ ಸ್ವಾಮೀಜಿಯವರು, ಬಿಜಿಎಸ್ ಆಡಳಿತ ಮಂಡಳಿ, ಎಲ್ಲ ಉಪನ್ಯಾಸಕರು ಹಾಗೂ ಅಮರ್ತ್ಯಸೇನ್ ಅರ್ಥಶಾಸ್ತ್ರ ವೇದಿಕೆ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.