ಸುಂದರವಾಗಿ ಕಾಣಬೇಕು, ಅಂದ ಚೆಂದದಲ್ಲಿ ತಾನು ಒಂದು ಹೆಜ್ಜೆ ಮುಂದೆ ಇರಬೇಕು ಅನ್ನೋದು ಪ್ರತಿಯೊಂದು ಹೆಣ್ಣಿನ ಮನದಾಸೆಯಾಗಿರುತ್ತೆ, ಅದಕ್ಕಾಗಿ ಅವರು ಮಾಡುವ ಸರ್ಕಸ್ಗಳು ಒಂದೆರಡಲ್ಲ ಬ್ಯೂಟಿ ಪಾಲ೯ರ್ ಗಳಿಗೆ ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. ಇನ್ನೂ ಕೆಲವರು ಲಕ್ಷಾಂತರ ರೂಪಾಯಿಯ ಸರ್ಜರಿ ಮಾಡಿಕೊಂಡು ತಮ್ಮ ಸೌಂದರ್ಯಕ್ಕೆ ಚೂರೂ ಲೋಪ ಬರದಂತೆ ನೋಡೊಳ್ತಾರೆ. ಇಲ್ಲೊಬ್ಬಳು ಮಹಾತಾಯಿ ತನ್ನ ಸೌಂದರ್ಯ ಎಂದೂ ಮಾಸಿ ಹೋಗಬಾರದು ಅಂತಾನೇ ಕೋಟಿ-ಕೋಟಿ ಖರ್ಚು ಮಾಡಿದ್ದಾಳೆ.
ಜೇನ್ ಪಾರ್ಕ್ ಈಕೆಯ ವಯಸ್ಸು 27. ಈಕೆ 17 ವರ್ಷದವಳಿದ್ದಾಗ ಈಕೆಯ ಅದೃಷ್ಟ ಖುಲಾಯಿಸಿತ್ತು. ಆಗ ಇವಳು ಬಂಪರ್ ಲಾಟರಿಯಲ್ಲಿ ಬರೋಬ್ಬರಿ 10 ಕೋಟಿ ರೂಪಾಯಿ ಗೆದ್ದಿದ್ದಳು. ಬ್ರಿಟನ್ನಲ್ಲಿ ಇಷ್ಟು ಚಿಕ್ಕವಯಸ್ಸಿನಲ್ಲಿ ಕೋಟಿ ಕೋಟಿ ರೂಪಾಯಿ ಮೌಲ್ಯದ ಲಾಟರಿ ಗೆದ್ದವರೇ ಯಾರೂ ಇರಲಿಲ್ಲ.
ಆಗ ಎಲ್ಲರ ಕಣ್ಣು ಜೇನ್ ಪಾರ್ಕ್ ಮೇಲೆಯೇ ಬಿದ್ದಿತ್ತು. 10 ಕೋಟಿ ಗೆದ್ದ ಖುಷಿಗೆ, ಆ ದುಡ್ಡನ್ನ ಏನು ಮಾಡಬೇಕು ಅನ್ನೋ ಯೋಚನೆಯೇ ಆಕೆಗೆ ಇರಲಿಲ್ಲ. ಕಾರು ಬಂಗಲೆ, ಆಭರಣ ಅಂತ ಕಂಡಿದ್ದನ್ನೆಲ್ಲ ಖರೀದಿ ಮಾಡಿದಳು. ಅಷ್ಟೆ ಅಲ್ಲ ತನ್ನ ಗೆಳೆಯನಿಗೂ ಬೇಕಾಗಿದ್ದನ್ನ ಬಿಂದಾಸ್ ಆಗಿ ಕೊಡಿಸಿದಳು. ಇಷ್ಟೆ ಆಗಿದ್ದರೆ ಒಂದು ಮಾತಿತ್ತು. ಈಗ ಈಕೆ ತಾನು ಗೆದ್ದ ಹಣದಿಂದ ತನ್ನ ದೇಹದ ಒಂದೊಂದು ಭಾಗಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವುದಾಗಿ ಹೇಳಿದ್ದಾಳೆ.
ಜೆನ್ ಲಾಟರಿ ಗೆದ್ದ ಹಣದಿಂದ 4 ಲಕ್ಷ ರೂಪಾಯಿ ಖರ್ಚು ಮಾಡಿ ತನ್ನ ಎದೆಯ ಭಾಗವನ್ನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ. ಆ ನಂತರ 2021ರಲ್ಲಿ ಕಾಸ್ಮೆಟಿಕ್ ಸರ್ಜರಿಗಾಗಿ 50 ಲಕ್ಷ ರೂಪಾಯಿ ಖರ್ಚು ಮಾಡಿದ್ದಾಳೆ. ಅದರ ಜೊತೆಗೆನೇ ಸೊಂಟದ ಕೊಬ್ಬು ತೆಗೆದು ಹಾಕಲು ಹಣವನ್ನ ನೀರಿನಂತೆ ಖರ್ಚು ಮಾಡಿದ್ದಾಳೆ. ಇದೆಲ್ಲದರ ಜೊತೆ ಜೊತೆಗೆನೇ ಹಲ್ಲು, ತುಟಿಯನ್ನ ಸಹ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ. ದೇಹದ ಪ್ರತಿಭಾಗವೂ ಅಂದಗೊಳಿಸಲು ಈಕೆ ಮಾಡಿದ್ದ ಒಟ್ಟು ಖರ್ಚು ಎಷ್ಟು ಅನ್ನೋದನ್ನ ಇನ್ನೂ ಈಕೆ ಬಹಿರಂಗ ಪಡಿಸಿಲ್ಲ. ಆದರೆ ತನ್ನ ಸೌಂದರ್ಯ ಇಮ್ಮಡಿಗೊಳಿಸಲು ತನ್ನ ದೇಹದ ಅನೇಕ ಭಾಗವನ್ನ ಸರ್ಜರಿ ಮಾಡಿಸಿಕೊಂಡಿದ್ದೇನೆ ಅಂತ ಮುಜುಗರ ಇಲ್ಲದೇ ಹೇಳ್ಕೊಳ್ತಾಳೆ ಈ ಸುಂದರಿ.