ಬೆಂಗಳೂರು: ಹೈಕೋರ್ಟ್ ಉದ್ಯೋಗಿಗೆ ಹನಿಟ್ರ್ಯಾಪ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹೈಕೋರ್ಟ್ ಉದ್ಯೋಗಿ ಜೈರಾಮ್ ಎಂಬುವವರನ್ನು ಅಕ್ಟೋಬರ್ 30ರಂದು ಹನಿಟ್ರ್ಯಾಪ್ ಮಾಡಲಾಗಿತ್ತು. ಕಾವೇರಿಪುರ ವಾರ್ಡ್ ನ ರಂಗನಾಥ ಪುರದಲ್ಲಿ ಈ ಘಟನೆ ನಡೆದಿತ್ತು.
ಖಾಸಗಿ ವಿಡಿಯೋ ತೋರಿಸಿ 2 ಲಕ್ಷ ರೂಪಾಯಿ ಹಣ ನೀಡುವಂತೆ ಗ್ಯಾಂಗ್ ಬೇಡಿಕೆ ಇಟ್ಟಿತ್ತು. ಈ ಬಗ್ಗೆ ಜೈರಾಮ್ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದೂರು ನೀಡಿದ್ದರು. ಇದೀಗ ಕಾಮಾಕ್ಷಿಪಾಳ್ಯ ಪೊಲೀಸರು ಹನಿಟ್ರ್ಯಾಪ್ ಗ್ಯಾಂಗ್ ನ 10 ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.