alex Certify 30 ವಯಸ್ಸಿನಂತೆ ಕಾಣುವ 55ರ ಮಹಿಳೆ: ಇದರ ಹಿಂದಿದೆ ಈ ಗುಟ್ಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

30 ವಯಸ್ಸಿನಂತೆ ಕಾಣುವ 55ರ ಮಹಿಳೆ: ಇದರ ಹಿಂದಿದೆ ಈ ಗುಟ್ಟು

ಫಿಟ್ ಆಗಿ ಉಳಿಯುವುದು ಮತ್ತು ವಯಸ್ಸಿಗಿಂತ ಕಿರಿಯರಾಗಿ ಕಾಣುವುದು ಬಹಳ ಕಷ್ಟದ ಕೆಲಸ. ಆಹಾರ ಕ್ರಮವನ್ನು ಹಿಡಿತದಲ್ಲಿಟ್ಟುಕೊಳ್ಳುವುದರಿಂದ ಹಿಡಿದು ಹೆಚ್ಚಿನ ಶಿಸ್ತಿನ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವವರೆಗೆ, ಫಿಟ್ ಆಗಿರಲು ಒಬ್ಬರು ಬಹಳಷ್ಟು ಕಷ್ಟ ಪಡಬೇಕು.

ಆದಾಗ್ಯೂ, 55 ವರ್ಷ ವಯಸ್ಸಿನ ಮಹಿಳೆ ತನ್ನ ಫಿಟ್‌ನೆಸ್ ಕಾಪಾಡಿಕೊಂಡಿದ್ದು, ತಮ್ಮ ನಿಜವಾದ ವಯಸ್ಸಿಗಿಂತ ಸುಮಾರು 20 ವರ್ಷ ಚಿಕ್ಕವಳಾಗಿ ಕಾಣಿಸಿಕೊಳ್ಳುತ್ತಾರೆ. ಕೆನಡಾದ ನಿನೆಟ್ಟೆ ಲಾಂಗ್ಸ್‌ವರ್ತ್ ಎಂಬ ಮಹಿಳೆ ಇದರ ಗುಟ್ಟನ್ನು ತಿಳಿಸಿದ್ದಾರೆ.

ಫಿಟ್‌ನೆಸ್ ತರಬೇತುದಾರರಾಗಿರುವ ಇವರು Instagram ನಲ್ಲಿ ಸಾವಿರಾರು ಅನುಯಾಯಿಗಳನ್ನು ಹೊಂದಿದ್ದಾರೆ ಮತ್ತು ಅವರ ವ್ಯಾಯಾಮದ ವೀಡಿಯೊಗಳು ಮತ್ತು ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. “ನನ್ನ ವಯಸ್ಸು ಎಷ್ಟು ಎಂದು ಜನರು ಯಾವಾಗಲೂ ಆಶ್ಚರ್ಯ ಪಡುತ್ತಾರೆ. ನಾನು ನನ್ನ ಮಕ್ಕಳೊಂದಿಗೆ ಇರುವಾಗ, ಅವರು ನಮ್ಮನ್ನು ಗೊಂದಲದಿಂದ ನೋಡುತ್ತಾರೆ. ನಾನು ಅವರ ಅಮ್ಮನಾಗುವಷ್ಟು ವಯಸ್ಸಾಗಿ ಕಾಣುತ್ತಿಲ್ಲ ಮತ್ತು ಅವರು ನಮ್ಮನ್ನು ಒಡಹುಟ್ಟಿದವರೆಂದು ತಪ್ಪಾಗಿ ಭಾವಿಸುತ್ತಾರೆ ಎಂದಿದ್ದಾರೆ.

ನಿನೆಟ್ ವೇಟ್‌ಲಿಫ್ಟಿಂಗ್ ಪ್ರಾರಂಭಿಸಿದ್ದರು. ನಂತರ ವಾರದಲ್ಲಿ ಸುಮಾರು ಆರು ಗಂಟೆಗಳ ಕಾಲ ಜಿಮ್‌ನಲ್ಲಿ ಕಳೆಯುತ್ತಾರೆ, ವ್ಯಾಯಾಮ ಮತ್ತು ತೂಕವನ್ನು ಎತ್ತುತ್ತಾರೆ. ಆಕೆಯ ಹೆಸರಿನಲ್ಲಿ ಕೆಲವು ಪವರ್‌ಲಿಫ್ಟಿಂಗ್ ದಾಖಲೆಗಳಿವೆ. ಅವಳ ಶಾಶ್ವತ ಯೌವನದ ರಹಸ್ಯವೆಂದರೆ ಅವಳ ಜೀವನಶೈಲಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...