10 ವರ್ಷದ ಬಾಲಕನೊಬ್ಬನ ತಮಾಷೆಯಿಂದಾಗಿ ವಿಮಾನ ಹೈಜಾಕ್ ಆಗಿದೆ ಎಂಬ ಭೀತಿಯನ್ನುಂಟು ಮಾಡಿರೋ ಘಟನೆ ಅಮೆರಿಕಾದಲ್ಲಿ ನಡೆದಿದೆ.
ಅಲಾಸ್ಕಾ ಏರ್‌ಲೈನ್ಸ್‌ನ ಫ್ಲೈಟ್‌ನಲ್ಲಿ ಪ್ರಯಾಣಿಕರು ಭಯಭೀತರಾದ ಘಟನೆ ನಡೆದಿದೆ. ಭಾನುವಾರದಂದು ಸಿಯಾಟಲ್‌ನಿಂದ ಒರ್ಲ್ಯಾಂಡೊಗೆ ತೆರಳುವ ವಿಮಾನದಲ್ಲಿ ಈ ಪ್ರಕರಣ ನಡೆದಿದೆ. ಒರ್ಲ್ಯಾಂಡೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ನಂತರ ವಿಮಾನವನ್ನು ಟ್ಯಾಕ್ಸಿವೇಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ಪರಿಶೀಲನೆ ನಡೆಸಲಾಯಿತು.
ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲ ಎಂದು ದೃಢಪಡಿಸಲಾಯಿತು. ಬಾಲಕನೊಬ್ಬ ವಿಮಾನದಲ್ಲಿದ್ದ ಇನ್ನೊಬ್ಬ ಪ್ರಯಾಣಿಕರಿಗೆ ಸಂದೇಶವನ್ನು ರವಾನಿಸಿದ್ದಾನೆ. ಹೀಗಾಗಿ ಭೀತಿಗೆ ಕಾರಣವಾಯಿತು.
ವಿಮಾನ ಹೈಜಾಕ್ ಸುಳ್ಳು ಸುದ್ದಿಯ ನಂತರ ಪೊಲೀಸರು ತಾಯಿ ಮತ್ತು ಮಗುವನ್ನು ವಿಮಾನದಿಂದ ಹೊರಕ್ಕೆ ಕರೆದೊಯ್ದಿದ್ದಾರೆ. ಅಂತಿಮವಾಗಿ ಉಳಿದ ಪ್ರಯಾಣಿಕರನ್ನು ವಿಮಾನದಿಂದ ಇಳಿಯಲು ಅನುಮತಿಸಲಾಯಿತು. ಬಾಲಕನ ತಮಾಷೆಯಿಂದಾಗಿ ತಾಯಿ ಗೋಳಾಡುವಂತಾಗಿತ್ತು. ಹಾಗೂ ಎಲ್ಲರ ಬಳಿಯೂ ಆಕೆ ಕ್ಷಮೆಯಾಚನೆ ಕೋರಿದ್ದಾಳೆ.
ತಾಯಿ-ಮಗನ ಮೇಲೆ ಯಾವುದೇ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಗೊತ್ತಿದ್ದೂ ಸುಳ್ಳು ಅಪಹರಣವನ್ನು ಬಿತ್ತರಿಸುವುದು ಕಾನೂನುಬಾಹಿರವಾಗಿದೆ.
ಘಟನೆ ಕುರಿತು ಅಲಾಸ್ಕಾ ಏರ್‌ಲೈನ್ಸ್ ಹೇಳಿಕೆ ಬಿಡುಗಡೆ ಮಾಡಿದ್ದು, ನಾವು ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಪ್ರಯಾಣಿಕರಿಗೆ ಅನಾನುಕೂಲತೆಗಾಗಿ ಕ್ಷಮೆಯಾಚಿಸಿದೆ.