ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿ ಕೊಮಾಕಿ ಎಲೆಕ್ಟ್ರಿಕ್ ತನ್ನ ಹೊಸ ಸ್ಕೂಟರ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕೊಮಾಕಿ ಫ್ಲೋರಾ ಎಲೆಕ್ಟ್ರಿಕ್ ಸ್ಕೂಟರ್ ಬಜೆಟ್ ಫ್ರೆಂಡ್ಲಿ ಅನ್ನೋದು ವಿಶೇಷ. ಕೊಮಾಕಿ ಫ್ಲೋರಾ ಸ್ಕೂಟರ್‌ನ ಬೆಲೆ 79 ಸಾವಿರ ರೂಪಾಯಿ. ನಾಲ್ಕು ವಿಭಿನ್ನ ಬಣ್ಣಗಳಲ್ಲಿ ಇದು ಲಭ್ಯವಿದೆ.
ವಿಶೇಷವೆಂದರೆ ಈ ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಕೇವಲ 10 ರೂಪಾಯಿಯಲ್ಲಿ 100 ಕಿ.ಮೀ. ಪ್ರಯಾಣ ಮಾಡಬಹುದು. ಇದರ ಬ್ಯಾಟರಿಯನ್ನು ಸುಲಭವಾಗಿ ತೆಗೆಯಬಹುದಾದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಮಿತವ್ಯಯದ ಜೊತೆಗೆ ಸ್ಕೂಟರ್ ತುಂಬಾ ಆಕರ್ಷಕವಾಗಿದೆ. ಸುಂದರವಾದ ಹೆಡ್‌ಲ್ಯಾಂಪ್‌ಗಳು, ಆರಾಮದಾಯಕ ಆಸನ ಪ್ರಯಾಣಿಕರನ್ನು ಆಕರ್ಷಿಸುವಂತಿದೆ. ಹಿಂದಿನ ಪ್ರಯಾಣಿಕರಿಗೆ ಹೆಚ್ಚುವರಿ ಬ್ಯಾಕ್ ರೆಸ್ಟ್ ಕೂಡ ಇದೆ. ಇದು ಡ್ಯುಯಲ್ ಫೂಟ್‌ರೆಸ್ಟ್ ಮತ್ತು ಫ್ಲಾಟ್ ಫೂಟ್ ಬೋರ್ಡ್ ಅನ್ನು ಹೊಂದಿದೆ.
ಸೊಗಸಾದ ಡ್ಯಾಶ್‌ಬೋರ್ಡ್, ರಿವರ್ಸ್ ಗೇರ್, ಪಾರ್ಕಿಂಗ್ ಮತ್ತು ಕ್ರೂಸ್ ಕಂಟ್ರೋಲ್‌ನೊಂದಿಗೆ ಸ್ವಯಂ-ಡಯಾಗ್ನೋಸ್ಟಿಕ್ ಮೀಟರ್‌ನಂತಹ ಸೌಲಭ್ಯಗಳನ್ನು ಈ ಸ್ಕೂಟರ್ ಒಳಗೊಂಡಿದೆ. ಕಪ್ಪು, ಕೆಂಪು, ಬೂದು ಮತ್ತು ಹಸಿರು ಬಣ್ಣಗಳಲ್ಲಿ ಕೊಮಾಕಿ ಫ್ಲೋರಾ ಲಭ್ಯವಿದೆ. ಇದು ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಹೊಂದಿದೆ. ಸ್ಕೂಟರ್ ಅನ್ನು ಸಂಪೂರ್ಣ ಚಾರ್ಜ್ ಮಾಡಿದರೆ 80 ರಿಂದ 100 ಕಿಮೀ ಓಡಿಸಬಹುದು. ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 1.8 ರಿಂದ 2 ಯೂನಿಟ್‌ಗಳಷ್ಟು ವಿದ್ಯುತ್ ಖರ್ಚಾಗುತ್ತದೆ. ಪ್ರತಿ ಯೂನಿಟ್‌ಗೆ ಸುಮಾರು 5 ರೂಪಾಯಿ ಎಂದು ಪರಿಗಣಿಸಿದರೂ 10 ರೂಪಾಯಿ ಖರ್ಚು ಮಾಡಿ 100 ಕಿಮೀ ಪ್ರಯಾಣಿಸಬಹುದು.