ಕಾಬೂಲ್ನಲ್ಲಿ 10 ಮಂದಿ ನಾಗರಿಕರ ಸಾವಿಗೆ ಕಾರಣವಾದ ಅಮೆರಿಕದ ಡ್ರೋನ್ ದಾಳಿಯ ವಿಡಿಯೋ ದೃಶ್ಯಾವಳಿಯ ತುಣುಕನ್ನು ಪೆಂಟಗನ್ ಸಾರ್ವಜನಿಕವಾಗಿ ರಿಲೀಸ್ ಮಾಡಿದೆ. ಅಪ್ಘಾನಿಸ್ತಾನದಲ್ಲಿ 20 ವರ್ಷಗಳ ಯುದ್ಧವನ್ನು ಅಂತ್ಯಗೊಳಿಸಿದ ಕೊನೆಯ ಅವಧಿಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.
ಅಮೆರಿಕ ಸೆಂಟ್ರಲ್ ಕಮಾಂಡ್ ವಿರುದ್ಧ ಫ್ರೀಡಂ ಆಫ್ ಇನ್ಫಾರ್ಮೇಷನ್ ಆ್ಯಕ್ಟ್ ಮೊಕದ್ದಮೆ ಹೂಡುವ ಮೂಲಕ ನ್ಯೂಯಾರ್ಕ್ ಟೈಮ್ಸ್ ಈ ವಿಡಿಯೋ ತುಣುಕು ಪಡೆಯುವಲ್ಲಿ ಯಶಸ್ವಿಯಾಗಿದೆ.
ಇದು ಆಗಸ್ಟ್ 29ರ ದಾಳಿಯ ಮೊದಲ ಸಾರ್ವಜನಿಕ ವಿಡಿಯೋವಾಗಿದೆ. ಈ ದಾಳಿಯನ್ನು ಆರಂಭದಲ್ಲಿ ಪೆಂಟಗನ್ ಸಮರ್ಥಿಸಿಕೊಂಡಿತ್ತು. ಆದರೆ ಬಳಿಕ ಇದೊಂದು ತಪ್ಪಾದ ದುರಂತ ಎಂದು ಹೇಳಿತ್ತು.
ಟೈಮ್ಸ್ ವರದಿ ಮಾಡಿರುವ ಎರಡು ಎಂಕ್ಯೂ 9 ರೀಪರ್ ಡ್ರೋನ್ಗಳು ಸುಮಾರು 25 ನಿಮಿಷಗಳ ತುಣುಕನ್ನು ಈ ವಿಡಿಯೋ ಬಿಡುಗಡೆ ಮಾಡಿದೆ. ಈ ವಿಡಿಯೋ ದೃಶ್ಯಾವಳಿಗಳಲ್ಲಿ ನಾಗರಿಕರ ಕಾರಿಗೆ ಅಪ್ಪಳಿಸುವುದನ್ನು ಕಾಣಬಹುದಾಗಿದೆ.