![](https://kannadadunia.com/wp-content/uploads/2022/04/10-minute-clean.jpg)
ಕ್ಲೀನಿಂಗ್, ಅಡುಗೆ, ಸ್ವೀಟ್..ಅಬ್ಬಾ ತಲೆ ತಿರುಗಿದಂತಾಗುತ್ತದೆ. ಅಷ್ಟು ಟೆನ್ಷನ್ ಬೇಡ. ಆರಾಮಾಗಿ ಹತ್ತೇ ನಿಮಿಷದಲ್ಲಿ ಮನೆ ಕ್ಲೀನ್ ಮಾಡುವ ಉಪಾಯ ನಾವು ಹೇಳ್ತೇವೆ ಕೇಳಿ.
ಮೊದಲು ಮನೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಸಾಮಾನಗಳನ್ನು ಎತ್ತಿಡಿ. ಇಡುವಾಗ ಅದು ಎಲ್ಲಿರಬೇಕಿತ್ತೋ ಅಲ್ಲಿಯೇ ಇಟ್ಟುಬಿಡಿ. ಇಷ್ಟು ಮಾಡಿದ್ರೆ ನಿಮ್ಮ ಕ್ಲೀನಿಂಗ್ ಕೆಲಸ ಅರ್ಧ ಮುಗಿದಂತೆ.
ನಂತ್ರ ಕೈಗೆ ಪೊರಕೆ ತೆಗೆದುಕೊಳ್ಳಿ. ಮೂಲೆ ಮೂಲೆ ಕ್ಲೀನ್ ಮಾಡಬೇಕೆಂದೇನೂ ಇಲ್ಲ. ತುಂಬಾ ಧೂಳಿರುವ, ಎದುರಿಗೆ ಕಾಣುವ ಜಾಗವನ್ನು ಮಾತ್ರ ಪೊರಕೆಯಿಂದ ಸ್ವಚ್ಛಗೊಳಿಸಿ. ಇದರಿಂದ ಸಮಯ ಉಳಿಯುತ್ತದೆ.
ಇದರ ನಂತ್ರ ಬಾತ್ ರೂಂ ಕ್ಲೀನ್ ಮಾಡಿ. ಅದಕ್ಕೆ ತುಂಬಾ ಸಮಯ ತೆಗೆದುಕೊಳ್ಳಬೇಡಿ. ಬಾತ್ ರೂಂ ಕ್ಲೀನ್ ಆದ್ರೆ ಮನೆಯೆಲ್ಲ ಕ್ಲೀನ್ ಆದಂತೆ.
ಇವೆಲ್ಲ ಆದ ಬಳಿಕ ಅಡುಗೆ ಮನೆಗೆ ಬನ್ನಿ. ಎಲ್ಲ ಪಾತ್ರೆಗಳನ್ನು ಮತ್ತೆ ಕ್ಲೀನ್ ಮಾಡಬೇಕೆಂದೇನೂ ಇಲ್ಲ. ಅಲ್ಲಿ ಬಿದ್ದ ಕಸವನ್ನು ಡಸ್ಟ್ ಬಿನ್ ಗೆ ಹಾಕಿ, ಪಾತ್ರೆ, ಗ್ಲಾಸ್, ಡಬ್ಬಗಳನ್ನು ಸರಿಯಾಗಿ ಜೋಡಿಸಿಡಿ.