ಇತ್ತೀಚಿನ ದಿನಗಳಲ್ಲಿ ಕಾರುಗಳ ಬಳಕೆ ಹೆಚ್ಚಾಗಿದ್ದು, ಅವುಗಳ ನಿರ್ವಹಣೆ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಅವಶ್ಯಕ. ಕಾರು ಸರ್ವಿಸಿಂಗ್ ಒಂದು ಪ್ರಮುಖ ವಿಚಾರವಾಗಿದ್ದು, ಯಾವಾಗ ಮಾಡಿಸಬೇಕು ಎಂಬ ಗೊಂದಲ ಅನೇಕರಲ್ಲಿರುತ್ತದೆ.
ಸಾಮಾನ್ಯವಾಗಿ 10,000 ಕಿ.ಮೀ ಅಥವಾ 1 ವರ್ಷ, ಯಾವುದು ಮೊದಲು ಬರುತ್ತದೆಯೋ ಆಗ ಸರ್ವಿಸಿಂಗ್ ಮಾಡಿಸಬೇಕು. ಆದರೆ, 90% ಜನರು ಕೇವಲ ಮೈಲೇಜ್ (10,000 ಕಿ.ಮೀ) ಅನ್ನು ಮಾತ್ರ ಪರಿಗಣಿಸಿ ಸರ್ವಿಸಿಂಗ್ ಮಾಡಿಸುತ್ತಾರೆ, ಇದು ತಪ್ಪು.
ಕಡಿಮೆ ಓಟದ ಕಾರು ಇದ್ದರೂ, ಒಂದು ವರ್ಷವಾದ ನಂತರ ಸರ್ವಿಸಿಂಗ್ ಮಾಡಿಸುವುದು ಕಡ್ಡಾಯ. ಏಕೆಂದರೆ, ಕಡಿಮೆ ಬಳಕೆಯಾದರೂ ಎಂಜಿನ್ ಆಯಿಲ್ ಕಾಲಾನಂತರದಲ್ಲಿ ತನ್ನ ಗುಣಮಟ್ಟವನ್ನು ಕಳೆದುಕೊಳ್ಳುತ್ತದೆ. ಇದರಿಂದ ಕಾರಿನ ಕಾರ್ಯಕ್ಷಮತೆ ಮತ್ತು ಮೈಲೇಜ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಅಧಿಕ ಓಟದ ಕಾರು ಹೊಂದಿದ್ದರೆ, 10,000 ಕಿ.ಮೀ ತಲುಪಿದ ತಕ್ಷಣ ಸರ್ವಿಸಿಂಗ್ ಮಾಡಿಸಬೇಕು. ಒಂದು ವರ್ಷವಾಗುವವರೆಗೆ ಕಾಯಬಾರದು. ಸಮಯಕ್ಕೆ ಸರಿಯಾಗಿ ಸರ್ವಿಸಿಂಗ್ ಮಾಡಿಸದಿದ್ದರೆ, ಎಂಜಿನ್ ಆಯಿಲ್ ಖಾಲಿಯಾಗಿ ಎಂಜಿನ್‌ಗೆ ಹಾನಿಯಾಗಬಹುದು.
ಸಕಾಲಿಕ ಸರ್ವಿಸಿಂಗ್ ಮಾಡಿಸುವುದರಿಂದ ಕಾರಿನ ಎಂಜಿನ್ ಉತ್ತಮ ಸ್ಥಿತಿಯಲ್ಲಿರುತ್ತದೆ, ಇಂಧನ ಬಳಕೆ ಕಡಿಮೆಯಾಗುತ್ತದೆ ಮತ್ತು ತಾಂತ್ರಿಕ ಸಮಸ್ಯೆಗಳನ್ನು ತಪ್ಪಿಸಬಹುದು. ಸರ್ವಿಸಿಂಗ್ ಸಮಯದಲ್ಲಿ ಕೇವಲ ಎಂಜಿನ್ ಆಯಿಲ್ ಬದಲಾಯಿಸುವುದು ಮಾತ್ರವಲ್ಲದೆ, ಕಾರಿನ ಸಂಪೂರ್ಣ ತಪಾಸಣೆ ನಡೆಸಿ ಯಾವುದೇ ಸಮಸ್ಯೆಗಳಿದ್ದರೂ ಸರಿಪಡಿಸಲಾಗುತ್ತದೆ.