alex Certify ಬೆರಗಾಗಿಸುತ್ತೆ ಈ ಜೀವಿಗಿರುವ ಕಾಲುಗಳ ಸಂಖ್ಯೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ಈ ಜೀವಿಗಿರುವ ಕಾಲುಗಳ ಸಂಖ್ಯೆ….!

ಸಹಸ್ರಪದಿಗಳ ಜಾತಿಗೆ ಸೇರಿದ ಮಿಲ್ಲಿಪೀಡ್‌ಗಳು ಭೂಮಿ ಮೇಲೆ ಬಂದ ಮೊದಲ ಪ್ರಾಣಿಗಳಾಗಿವೆ. ಇಂದು ಈ ಮಿಲ್ಲಿಪೀಡ್‌ಗಳ 13,000ಕ್ಕೂ ಹೆಚ್ಚಿನ ತಳಿಗಳ ಬಗ್ಗೆ ಮನುಕುಲ ತಿಳಿದುಕೊಂಡಿದೆ. ಬಹುಕಾಲುಗಳ ಈ ಜೀವಿಗಳ ಸಹಸ್ರಾರು ತಳಿಗಳನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಕೊಳ್ಳುವುದು ಇದೆ.

ಲ್ಯಾಟಿನ್ ಭಾಷೆಯಲ್ಲಿ ಒಮಿಲ್ಲಿಪೆಡೆಯೋ ಹೆಸರಿನ ಈ ತಳಿಯ ಜೀವಿಯೊಂದಕ್ಕೆ 750ರಷ್ಟು ಕಾಲುಗಳಿರುವುದನ್ನು ಕಂಡುಕೊಂಡಿದ್ದೇವೆ. ಆದರೆ ಇತ್ತೀಚೆಗೆ, ಪಶ್ಚಿಮ ಆಸ್ಟ್ರೇಲಿಯಾದ ದಕ್ಷಿಣ ಕರಾವಳಿ ತೀರದಲ್ಲಿ ಭೂಮಿಯೊಳಗೆ 60 ಮೀಟರ್‌ ಆಳದಲ್ಲಿ ಕಂಡ, ಕಣ್ಣುಗಳಿಲ್ಲದ ಯುಮಿಲ್ಲಿಪೆಸ್‌ ಪೆರೆಸೆಫೋನ್ ಹೆಸರಿನ ಈ ಜೀವಿಗೆ 1,306 ಕಾಲುಗಳಿರುವುದು ಕಂಡು ಬಂದಿದೆ.

ಭೂಮೇಲ್ಮೈನ ತಾಪಮಾನವು ಹೆಚ್ಚಾದಂತೆ ಸಿಫೋನೋಟಿಡೇಟ್ ಎಂಬ ಕುಟುಂಬದ ಈ ಜೀವಿಗಳು ಭೂಗರ್ಭದೊಳಗೆ ಸೇರಲು ಆರಂಭಿಸಿದವೆಂದು ನಂಬಲಾಗಿದೆ. ಮಣ್ಣಿನ ಸಣ್ಣ ಸಂಧಿಗಳನ್ನು ಸೀಳಿಕೊಂಡು ಭೂಮಿಯ ಆಳಕ್ಕೆ ಹೋಗಲು ಈ ಜೀವಿಗಳಿಗೆ ಅಷ್ಟು ಕಾಲುಗಳು ಸಹಾಯ ಮಾಡುತ್ತವೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...