ಬೀಜಿಂಗ್: ದಕ್ಷಿಣ ಆಫ್ರಿಕಾದಲ್ಲಿ ಹೊಸ ವೈರಸ್ ಪತ್ತೆಯಾಗಿದೆ. ಬಾವಲಿಗಳಲ್ಲಿ ಕಂಡುಬಂದಿರುವ ವೈರಸ್ ರೂಪಾಂತರಗೊಂಡರೆ ಅಪಾಯ ಕಾದಿದೆ. ಇದು ಮನುಷ್ಯರಿಗೆ ಹಬ್ಬಿದರೆ ಮೂವರಲ್ಲಿ ಒಬ್ಬರ ಸಾವು ಗ್ಯಾರಂಟಿ ಎಂದು ಹೇಳಲಾಗಿದೆ.
ಕೊರೋನಾ ಬಳಿಕ ಒಮಿಕ್ರಾನ್ ವಿಶ್ವದಾದ್ಯಂತ ಆತಂಕ ಸೃಷ್ಟಿಸಿದೆ. ಇದರ ನಡುವೆಯೇ ದಕ್ಷಿಣ ಆಫ್ರಿಕಾದಲ್ಲಿ ನಿಯೋಕೋವ್ ಹೊಸ ಕೊರೋನಾ ರೂಪಾಂತರಿ ಪತ್ತೆಯಾಗಿದ್ದು, ಬಾವಲಿಗಳಲ್ಲಿ ಮಾತ್ರ ಹರಡುತ್ತಿದೆ. ಮುಂದಿನ ದಿನಗಳಲ್ಲಿ ಮನುಷ್ಯರ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಈ ವೈರಸ್ ಮತ್ತಷ್ಟು ರೂಪಾಂತರಗೊಂಡು ಸೋಂಕು ತಗಲಿದರೆ ಮೂವರಲ್ಲಿ ಒಬ್ಬರು ಸಾವನ್ನಪ್ಪಲಿದ್ದಾರೆ ಎಂದು ಚೀನಾದ ವುಹಾನ್ ವಿಶ್ವವಿದ್ಯಾಲಯದ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಅಂದ ಹಾಗೆ, ವುಹಾನ್ ನಲ್ಲಿ ಕೊರೋನಾ ವೈರಸ್ ಮೊದಲಿಗೆ ಪತ್ತೆಯಾಗಿ ವಿಶ್ವಕ್ಕೇ ಹರಡಿ ಲಕ್ಷಾಂತರ ಮಂದಿಯನ್ನು ಬಲಿ ತೆಗೆದುಕೊಂಡಿದೆ.