2021ರಲ್ಲಿ ಲಸಿಕೆಯೇ ಅಮೃತ ಎನ್ನುವ ಮಟ್ಟದ ಮಾತುಗಳು ಟ್ರೆಂಡ್ ಆಗುತ್ತಿವೆ. ಕೋವಿಡ್-19 ಸಾಂಕ್ರಾಮಿಕದ ನಡುವೆ ಸಂಪೂರ್ಣ ಪ್ರಮಾಣದಲ್ಲಿ ಲಸಿಕೆಯನ್ನು ಪ್ರತಿಯೊಬ್ಬರಿಗೂ ನೀಡುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ.
ಕೋವಿಡ್ ಲಸಿಕೆ ಅಭಿಯಾನಕ್ಕೆ ಚುರುಕು ಮುಟ್ಟಿಸಲು ಮುಂದಾದ ಗುಜರಾತ್‌ನ ಅಹಮದಾಬಾದ್ ನಗರಾಡಳಿತ ಲಕ್ಕಿ ಡ್ರಾ ಘೋಷಿಸಿದ್ದು, ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದ ಒಬ್ಬ ವ್ಯಕ್ತಿಗೆ 60,000 ರೂ. ಬೆಲೆಯ ಸ್ಮಾರ್ಟ್‌ಫೋನ್ ನೀಡುವುದಾಗಿ ಘೋಷಿಸಿದೆ.
ಡಿಸೆಂಬರ್ 1ರಿಂದ 7ನೇ ತಾರೀಖಿನ ನಡುವೆ ತಮ್ಮ ಎರಡನೇ ಲಸಿಕೆ ಪಡೆದ ಮಂದಿ ಈ ಲಕ್ಕಿ ಡ್ರಾಗೆ ಅರ್ಹರು. ಈ ಲಕ್ಕಿ ಡ್ರಾ ಅನ್ನು ಅಹಮದಾಬಾದ್ ನಗರಸಭೆ ಹಮ್ಮಿಕೊಳ್ಳಲಿದೆ.
ಈ ಮುನ್ನ ಲಸಿಕೆ ಪಡೆದ ಸಹಸ್ರಾರು ಮಂದಿಗೆ ಅಡುಗೆ ಎಣ್ಣೆಯನ್ನು ಕಾಂಪ್ಲಿಮೆಂಟ್ ಆಗಿ ನೀಡಿತ್ತು ಎಎಂಸಿ.
ಇಂಥದ್ದೇ ನಡೆಯೊಂದರಲ್ಲಿ, ಹರಿಯಾಣಾದ ನುಹ್ ಜಿಲ್ಲಾಡಳಿತವು ಲಸಿಕೆ ಪಡೆದ ವ್ಯಕ್ತಿಗಳಿಗೆ ಮದ್ದುಗಳ ಮೇಲೆ ವಿನಾಯಿತಿ, ಉಚಿತ ಹೆಲ್ಮೆಟ್‌ಗಳು ಹಾಗೂ ಡಿನ್ನರ್ ಸೆಟ್‌ಗಳನ್ನು ನೀಡುವುದಾಗಿ ಘೋಷಿಸಿದೆ.
ಮಹಾರಾಷ್ಟ್ರದ ಚಂದ್ರಾಪುರ ನಗರಸಭೆ ಸಹ ಹೆಚ್ಚಿನ ಪ್ರಮಾಣದಲ್ಲಿ ಲಸಿಕಾಕರಣ ಖಾತ್ರಿಪಡಿಸುವ ಉದ್ದೇಶದಿಂದ ಲಕ್ಕಿ ಡ್ರಾ ಹಮ್ಮಿಕೊಂಡಿದೆ. ಎಲ್‌ಇಡಿ ಟಿವಿಗಳು, ರೆಫ್ರಿಜರೇಟರ್‌ಗಳು ಹಾಗೂ ವಾಷಿಂಗ್ ಮಷಿನ್‌ನಂಥ ಆಕರ್ಷಕ ಬಹುಮಾನಗಳನ್ನು ಲಸಿಕೆ ಪಡೆದ ಮಂದಿಗೆ ನಡೆಸುವ ಲಕ್ಕಿ ಡ್ರಾನಲ್ಲಿ ಇಡಲಾಗಿದೆ.
ಲಸಿಕೆ ಪಡೆದವರಲ್ಲಿ ಒಬ್ಬ ಅದೃಷ್ಟಶಾಲಿ 5,000 ರೂ.ಗಳ ಬಹುಮಾನ ಗೆಲ್ಲುವ ಸಾಧ್ಯತೆ ಇದೆ ಎಂದು ಟ್ವಿಟರ್‌ನಲ್ಲಿ ಮೈಗವ್‌ಇಂಡಿಯಾ ಘೋಷಿಸಿದೆ. ಇದಕ್ಕಾಗಿ ನೀವು ಲಸಿಕೆ ಪಡೆದ ಚಿತ್ರವನ್ನು ಆಸಕ್ತಿಕರ ಟ್ಯಾಗ್‌ಲೈನ್‌ನೊಂದಿಗೆ ಪೋಸ್ಟ್ ಮಾಡಬೇಕಾಗುತ್ತದೆ.
ಇದಕ್ಕಿಂತ ಇನ್ನೊಂದು ಹೆಜ್ಜೆ ಮುಂದೆ ಹೋದ ಗುಜರಾತ್‌ನ ರಾಜ್‌ಕೋಟ್‌ನ ಚಿನ್ನದ ವರ್ತಕರ ಸಮುದಾಯವು ಲಸಿಕೆ ಪಡೆದವರಲ್ಲಿ ಅದೃಷ್ಟಶಾಲಿಗಳಿಗೆ ಚಿನ್ನದ ಮೂಗುತಿಗಳನ್ನು ಕೊಡುವುದಾಗಿ ಘೋಷಿಸಿದೆ.
ಇದೇ ವೇಳೆ, ಲಸಿಕೆ ಪಡೆಯದ ಮಂದಿಗೆ ನವೆಂಬರ್ 30ರಿಂದ ಉಚಿತ ಚಿಕಿತ್ಸೆಯ ಸವಲತ್ತನ್ನು ಹಿಂಪಡೆಯಲು ಕೇರಳ ಸರ್ಕಾರ ನಿರ್ಧರಿಸಿದೆ.