ವಿಜಯಪುರ: ಆನ್ಲೈನ್ ಷೇರ್ ಟ್ರೇಡಿಂಗ್ ನಲ್ಲಿ ಹಣ ಹಾಕಿದ ಇಂಜಿನಿಯರ್ ಒಬ್ಬರು ಒಂದೂವರೆ ಕೋಟಿಗೂ ಅಧಿಕ ಹಣ ಕಳೆದುಕೊಂಡಿದ್ದಾರೆ.
ಸಿಂದಗಿಯ ಬಾಪು ಗೌಡ ಪಾಟೀಲ್ ವಂಚನೆಗೊಳಗಾದ ಇಂಜಿನಿಯರ್. ಟ್ರೇಡ್ ಬುಲ್ಸ್ ಎಂಬ ಷೇರ್ ಟ್ರೇಡಿಂಗ್ ಆಪ್ ಮೂಲಕ ರಿಯಾಯಿತಿ ದರದಲ್ಲಿ ಖರೀದಿಸಿದ ಷೇರುಗಳನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಹಂಚಿಕೆ ಮಾಡುವುದಾಗಿ ವಂಚಕರು ಬಾಪು ಗೌಡರನ್ನು ನಂಬಿಸಿದ್ದಾರೆ.
ನಕಲಿ ಆಪ್ ಮೇಲೆ ವಿಶ್ವಾಸ ಇಟ್ಟ ಅವರು ಹೆಚ್.ಡಿ.ಎಫ್.ಸಿ. ಬ್ಯಾಂಕ್ ಖಾತೆಯಿಂದ 1.32 ಕೋಟಿ ರೂ., ಐಸಿಐಸಿಐ ಬ್ಯಾಂಕ್ ನಿಂದ 29.62 ಲಕ್ಷ ರೂಪಾಯಿ ಜೊತೆಗೆ 14 ಬ್ಯಾಂಕ್ ಖಾತೆಗಳಿಗೆ ಆನ್ಲೈನ್ ಮೂಲಕ 1.61 ಕೋಟಿ ರೂ. ವರ್ಗಾಯಿಸಿದ್ದಾರೆ. ಬಳಿಕ ಅವರಿಗೆ ವಂಚನೆಗೊಳಗಾಗಿರುವುದು ತಿಳಿದು ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.