ನವದೆಹಲಿ : ಆಗಸ್ಟ್ ತಿಂಗಳಲ್ಲಿ 1.6 ಲಕ್ಷ ಕೋಟಿ ರೂ. GST ಸಂಗ್ರಹವಾಗಿದೆ ಎಂದು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಇಂದು ಮಾಹಿತಿ ನೀಡಿದ್ದಾರೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) 2023 ರ ಆಗಸ್ಟ್ ನಲ್ಲಿ 1.6 ಲಕ್ಷ ಕೋಟಿ ರೂ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 11 ರಷ್ಟು ಹೆಚ್ಚಾಗಿದೆ ಎಂದು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಮಾಹಿತಿ ನೀಡಿದ್ದಾರೆ.ಆಗಸ್ಟ್ 2022 ರಲ್ಲಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು 1,43,612 ಕೋಟಿ ಆಗಿತ್ತು.
ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆಯ ದರ (ಜಿಡಿಪಿ) ಶೇಕಡಾ 7.8 ರಷ್ಟಿತ್ತು ಎಂದು ಮಲ್ಹೋತ್ರಾ ಹೇಳಿದರು. ಜೂನ್ ತ್ರೈಮಾಸಿಕದಲ್ಲಿ ಜಿಎಸ್ಟಿ ಆದಾಯವು ಶೇಕಡಾ 11 ಕ್ಕಿಂತ ಹೆಚ್ಚಾಗಿದೆ. ಇದರರ್ಥ ತೆರಿಗೆ ಮತ್ತು ಜಿಡಿಪಿ ಅನುಪಾತವು 1.3 ಕ್ಕಿಂತ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
2023ರ ಜೂನ್ ತಿಂಗಳಲ್ಲಿ ಜಿಎಸ್ಟಿ ಸಂಗ್ರಹ 161497 ಕೋಟಿ ರೂಪಾಯಿಯಾಗಿತ್ತು. ಈ ಪೈಕಿ 31,013 ಕೋಟಿ ಕೇಂದ್ರ ಜಿಎಸ್ಟಿಯಾಗಿದ್ದರೆ, ಸ್ಟೇಟ್ ಜಿಎಸ್ಟಿ 38,292 ಕೋಟಿ ರೂಪಾಯಿಯಾಗಿತ್ತು. ಐಜಿಎಸ್ಟಿ 80,292 ಕೋಟಿ ರೂ.ಯಾಗಿತ್ತು. ಅಲ್ಲದೇ ಸೆಸ್ ಮೊತ್ತ 11,900 ಕೋಟಿ ರೂಪಾಯಿಯಾಗಿತ್ತು.