ಕೆಲವೊಂದು ಘಟನೆಗಳು ಕಣ್ಮುಂದೆ ನಡೆದರೂ ನಂಬೋದು ಕಷ್ಟ. ಅದು ನಮ್ಮ ಭ್ರಮೆ ಇರಬಹುದೇನೋ ಅಂತಾನೇ ಅಂದೊಂಡು ಬಿಟ್ಟಿರ್ತೆವೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ನೋಡ್ತಿದ್ರೆ ನೀವು ಒಂದೆರಡು ಕ್ಷಣ ಕನ್ಫ್ಯೂಸ್ ಆಗ್ಬಿಡೊದಂತೂ ಗ್ಯಾರಂಟಿ.
ಬೂಟೆನ್‌ಗೆಬಿಡೆನ್ ಅನ್ನೊರು ಅಪ್‌ಲೋಡ್ ಮಾಡಿರುವ ಈ ವಿಡಿಯೋ ಶೀರ್ಷಿಕೆಯಲ್ಲಿ, ‘ಇದೇನು ಭ್ರಮೆಯಾ?’ ಎಂದು ಬರೆದುಕೊಂಡಿದ್ದಾರೆ. ನೀವು ಕೂಡಾ, ಈ 7 ಸೆಕೆಂಡ್ ವಿಡಿಯೋ ನೋಡಿ ಶಾಕ್ ಆಗ್ಬಿಡ್ತಿರಾ!
ಇಲ್ಲಿ ಕಿಟಕಿ ಹೊರಗೆ ಬೇರೊಂದು ಬೆಕ್ಕು ನಿಂತಿರುತ್ತೆ. ಅದಿನ್ನೇನು ಕಿಟಕಿ ಸಂದಿಯಿಂದ ಒಳಗೆ ಬರ್ಬೇಕು ಅಂದೊಳ್ಳುವಷ್ಟರಲ್ಲೇ ಆ ಬೆಕ್ಕು ಎರಡಾಗಿರುತ್ತೆ. ಇದು ಕಣ್ಣಿಗೆನೇ ಮೋಸ ಮಾಡುವಂತಹ ವಿಡಿಯೋ. ನೆಟ್ಟಿಗರು ಈ ವಿಡಿಯೋವನ್ನ ಪದೇ ಪದೇ ನೋಡಿ, ಅದೇಗೆ ಸಾಧ್ಯ ಅಂತ ಅಂದ್ಕೊಳ್ತಿದ್ದಾರೆ.
ಇಲ್ಲಿ ಒಂದು ಕಿಟಕಿ ಸಂದಿಯಿಂದ, ಇನ್ನೇನು ನುಸುಳಿ ಒಳಗೆ ಬರ್ಬೆಕು ಅಷ್ಟರಲ್ಲೇ ಇನ್ನೊಂದು ಬೆಕ್ಕು ಅದೇ ಬೆಕ್ಕಿನ ಜೊತೆಜೊತೆಗೆ ಸಂದಿಯಿಂದ ಒಳಗೆ ನುಗ್ಗಿ ಬರುತ್ತೆ. ಈ ವಿಡಿಯೋ ಗಮನವಿಟ್ಟು ನೋಡಿದಾಗ ನಿಮಗೂ ಗೊತ್ತಾಗುತ್ತೆ. ಅಲ್ಲಿ ಹೊರಗಡೆ ಎರಡು ಬೆಕ್ಕುಗಳು ನಿಂತಿರುತ್ತೆ. ಆದರೆ ಒಳಗೆ ಬರುವಾಗ ಎರಡು ಬೆಕ್ಕುಗಳು ಒಟೊಟ್ಟಿಗೆ ನುಗ್ಗಿ ಬಂದಿರುತ್ತೆ. ಆಗ ಒಂದೇ ಬೆಕ್ಕು ಎರಡು ಆದಂತೆ ಭಾಸವಾಗುತ್ತೆ.
ನೆಟ್ಟಿಗರು ಈ ವಿಡಿಯೋ ನೋಡಿ ಶಾಕ್ ಆಗಿದ್ದಾರೆ. ಎಲ್ಲರೂ ಇದೊಂದು ಮಾಯಾವಿ ವಿಡಿಯೋ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ಇದು ಕಣ್ಣಿಗೆ ಆಗಿರೋ ಮೋಸ ಎಂದು ಬರೆದು ಕಾಮೆಂಟ್ ಬಾಕ್ಸ್‌ನಲ್ಲಿ ಸಂದೇಶಗಳನ್ನ ಹಾಕಿದ್ದಾರೆ.
https://twitter.com/buitengebieden/status/1614641149037187073?ref_src=twsrc%5Etfw%7Ctwcamp%5Etweetembed%7Ctwterm%5E1614641149037187073%7Ctwgr%5E18f78154fb4c0e5cded8bce746df0a064d341f16%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-one-cat-turns-into-two-as-it-sneaks-inside-unbelievable-but-true-watch-5855054%2F