alex Certify 1 ಪ್ಲೇಟ್ ಮ್ಯಾಗಿಗೆ 193 ರೂ. ಕೊಟ್ಟ ಯೂಟ್ಯೂಬರ್; ಇದೇನು ವಿಮಾನದ ಇಂಧನ ಬಳಸಿ ತಯಾರಿಸಿದ್ರ ಅಂತ ಕೇಳಿದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1 ಪ್ಲೇಟ್ ಮ್ಯಾಗಿಗೆ 193 ರೂ. ಕೊಟ್ಟ ಯೂಟ್ಯೂಬರ್; ಇದೇನು ವಿಮಾನದ ಇಂಧನ ಬಳಸಿ ತಯಾರಿಸಿದ್ರ ಅಂತ ಕೇಳಿದ ನೆಟ್ಟಿಗರು

ಉದ್ಯಮಿ ಮತ್ತು ಯೂಟ್ಯೂಬರ್ ಆಗಿರುವ ಸೆಜಲ್ ಸುದ್ ಎಂಬಾಕೆ ವಿಮಾನ ನಿಲ್ದಾಣದಲ್ಲಿದ್ದಾಗ ಏನಾದ್ರೂ ತಿಂಡಿ ತಿನ್ನೋಣವೆಂದು ಕೆಫೆಯೊಂದರಲ್ಲಿ ಮ್ಯಾಗಿಯನ್ನು ಆರ್ಡರ್ ಮಾಡಿದ್ದಾರೆ. ಮ್ಯಾಗಿ ತಿಂದ ಬಳಿಕ ಬಿಲ್ ನೋಡಿದ ಆಕೆ ಶಾಕ್ ಆಗಿದ್ದಾರೆ. ಯಾಕೆಂದರೆ ಕೇವಲ ಒಂದು ಪ್ಲೇಟ್ ಮ್ಯಾಗಿಗೆ ರೂ. 193 (ತೆರಿಗೆ ಸೇರಿ) ವಿಧಿಸಲಾಗಿತ್ತು.

ಮ್ಯಾಗಿ ಬಿಲ್ ನ ಫೋಟೋವನ್ನು ಸೆಜಲ್ ಕೂಡಲೇ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅತಿಯಾದ ಬೆಲೆ ವಿಧಿಸಿದ ಬಗ್ಗೆ ಆಕೆ ಪ್ರಶ್ನಿಸಿದ್ದಾರೆ. ಇದು ಆನ್‌ಲೈನ್‌ನಲ್ಲಿ ಚರ್ಚೆಯನ್ನು ಪ್ರಾರಂಭಿಸಿತು. ನಾನು ಈಗಷ್ಟೇ ಮ್ಯಾಗಿಯನ್ನು ವಿಮಾನ ನಿಲ್ದಾಣದಲ್ಲಿ ರೂ. 193ಕ್ಕೆ ಖರೀದಿಸಿದೆ. ಬಿಲ್ ನೋಡಿ ಅಚ್ಚರಿಗೊಂಡಿದ್ದೇನೆ. ಯಾರಾದರೂ ಮ್ಯಾಗಿಯನ್ನು ಇಷ್ಟು ಬೆಲೆಗೆ ಏಕೆ ಮಾರಾಟ ಮಾಡುತ್ತಾರೆ ಎಂದು ಸೆಜಲ್ ಬಿಲ್‌ನ ಫೋಟೋ ಸಹಿತ ಟ್ವೀಟ್ ಮಾಡಿದ್ದಾರೆ.

ಮ್ಯಾಗಿ ಇನ್‌ಸ್ಟಂಟ್ ನೂಡಲ್ಸ್‌ನ 70 ಗ್ರಾಂ ಪ್ಯಾಕೆಟ್‌ನ ಬೆಲೆ 14 ರೂ., ಒಂದು ಬೌಲ್‌ಗೆ ಸರಾಸರಿ 30 ರಿಂದ 100 ರೂ. ಬೆಲೆ ನಿಗದಿ ಮಾಡಬಹುದು. ಆದರೆ, ಮೂಲ ಬೆಲೆಗಿಂತ ಸುಮಾರು ಐದು ಪಟ್ಟು ಹೆಚ್ಚು ಶುಲ್ಕ ವಿಧಿಸಿದ್ದಕ್ಕಾಗಿ ವಿಮಾನ ನಿಲ್ದಾಣದ ಉಪಾಹಾರ ಗೃಹದ ಬಗ್ಗೆ ನೆಟ್ಟಿಗರು ಕಿಡಿಕಾರಿದ್ರು.

ಈ ಪೋಸ್ಟ್ ಹಲವಾರು ಪ್ರತಿಕ್ರಿಯೆಗಳನ್ನು ಪ್ರಚೋದಿಸಿತು. ಏರ್‌ಪೋರ್ಟ್ ಆಹಾರ ಮಾತ್ರವಲ್ಲದೆ ಏರ್‌ಲೈನ್‌ಗಳು ಸಹ ಆಹಾರಕ್ಕಾಗಿ ಸಾಕಷ್ಟು ಹಣವನ್ನು ಹೇಗೆ ವಿಧಿಸುತ್ತವೆ ಎಂಬುದನ್ನು ಬಳಕೆದಾರರು ಬರೆದಿದ್ದಾರೆ. ಇದು ಇಂಡಿಗೋ ವಿಮಾನಗಳಲ್ಲಿ ರೂ. 250 ಕ್ಕೆ ಮಾರಾಟವಾಗುತ್ತಿದೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಮ್ಯಾಗಿ ಬೆಲೆ ರೂ. 50. ಆದರೆ, ವಿಮಾನ ನಿಲ್ದಾಣದಲ್ಲಿ ಮಾರಾಟ ಮಾಡಲು ಸಾಕಷ್ಟು ಹಣ ಖರ್ಚಾಗುತ್ತದೆ. ಏಕೆಂದರೆ ಮ್ಯಾಗಿ ಮಾರಾಟ ಮಾಡುವ ಕೆಫೆಗೆ ಆ ಸ್ಥಳವನ್ನು ಸ್ಥಾಪಿಸಲು ದೊಡ್ಡ ಮೊತ್ತದ ಠೇವಣಿ ಪಾವತಿಸಬೇಕಾಗುತ್ತದೆ. ದೊಡ್ಡ ಮೊತ್ತದ ಬಾಡಿಗೆಯನ್ನು ಪಾವತಿಸಬೇಕಾಗುತ್ತದೆ. ಅದರ ಮೇಲೆ ಮ್ಯಾಗಿ ತಯಾರಿಸುವ ಸಿಬ್ಬಂದಿಗೆ ವೇತನ ಮತ್ತು ಅವರ ಹೂಡಿಕೆಗೆ ಸ್ವಲ್ಪ ಲಾಭ. 5 ಸ್ಟಾರ್ ಹೋಟೆಲ್‌ಗಳಲ್ಲಿ ಇದೇ ರೀತಿಯ ಘಟನೆ ನಡೆಯುತ್ತದೆ. ಆದ್ದರಿಂದ, ಮುಂದಿನ ಬಾರಿ ನೀವು ವಿಮಾನ ನಿಲ್ದಾಣಕ್ಕೆ ಹೋದಾಗ, ಕಂಪನಿಯು ನಿಮ್ಮ ಟಿಎ/ಡಿಎಗೆ ಪಾವತಿಸದಿದ್ದರೆ ಮನೆಯಿಂದ ಟಿಫಿನ್ ಬಾಕ್ಸ್ ತೆಗೆದುಕೊಳ್ಳಿ, ಅಂತಾ ಇನ್ನೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

— Sejal Sud (@SejalSud) July 16, 2023

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...