ಪ್ರಪಂಚದೆಲ್ಲೆಡೆ ಹಲವಾರು ಜನರು ತಮ್ಮ ಹೆಸರನ್ನು ಗಿನ್ನಿಸ್ ಬುಕ್ನಲ್ಲಿ ದಾಖಲಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಾರೆ. ಸಾಮಾನ್ಯವಾಗಿ ಹಲವಾರು ವಿಶ್ವ ದಾಖಲೆಗಳನ್ನು ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತದೆ.
ಇತ್ತೀಚೆಗಷ್ಟೇ ಬ್ರಿಟನ್ ಯುವತಿಯೊಬ್ಬರು ಒಂದು ನಿಮಿಷದಲ್ಲಿ ಅತಿ ಹೆಚ್ಚು ಚಿಕನ್ ನಗ್ಗೆಟ್ಸ್ ಗಳನ್ನು ತಿಂದು ಗಿನ್ನಿಸ್ ವಿಶ್ವದಾಖಲೆ ನಿರ್ಮಿಸಿದ್ದಾರೆ. ಯುಕೆಯ ಲೇಹ್ ಶಟ್ಕೆವರ್ ಅವರು ಕೇವಲ 60 ಸೆಕೆಂಡುಗಳಲ್ಲಿ 19 ನಗ್ಗೆಟ್ಸ್ ಗಳನ್ನು ತಿಂದಿದ್ದಾರೆ. ಇದು 352 ಗ್ರಾಂ ಕೋಳಿ ಮಾಂಸವನ್ನು ಹೊಂದಿತ್ತು. ಈ ಸಾಧನೆಯೊಂದಿಗೆ ಅವರು 2020 ರಲ್ಲಿ ನೆಲಾ ಜಿಸ್ಸೆರ್ ಮಾಡಿದ್ದ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. ಅವರು ಒಂದು ನಿಮಿಷದಲ್ಲಿ 298 ಗ್ರಾಂ ಮೌಲ್ಯದ ನುಗ್ಗೆಟ್ಸ್ ಗಳನ್ನು ಸೇವಿಸಿದ್ದರು.
ಲೇಹ್ ಶಟ್ಕೆವರ್ ತಿನ್ನುವ ವಿಚಾರದಲ್ಲಿ ಹಲವಾರು ದಾಖಲೆಗಳನ್ನು ಹೊಂದಿದ್ದಾರೆ. ಕಳೆದ ಬಾರಿ ಮೂರು ನಿಮಿಷಗಳಲ್ಲಿ ಗರಿಷ್ಠ ಸಂಖ್ಯೆಯ ಜೆಲ್ಲಿ ಡೊನಟ್ಸ್ ಅನ್ನು ಸೇವಿಸಿದ್ದರು. ಮೂರು ನಿಮಿಷಗಳಲ್ಲಿ ಹೆಚ್ಚು ಜಾಮ್ ಡೊನಟ್ಸ್, 30 ಸೆಕೆಂಡ್ಗಳಲ್ಲಿ ಹೆಚ್ಚು ಲಸಾಂಜವನ್ನು ತಿಂದಿದ್ದು ಮತ್ತು ವೇಗವಾಗಿ ಸೌತೆಕಾಯಿ ಸೇವಿಸಿದ್ದು ಸೇರಿದಂತೆ ಇತರ ದಾಖಲೆಗಳನ್ನು ಒಳಗೊಂಡಿದೆ. ಒಂದು ಲೀಟರ್ ಗ್ರೇವಿಯನ್ನು ಅತಿ ವೇಗವಾಗಿ ಸೇವಿಸಿದ ದಾಖಲೆಯನ್ನೂ ಅವರು ಹೊಂದಿದ್ದಾರೆ.