ಭಾರತೀಯ ರೈಲ್ವೇಯು ಶೀಘ್ರದಲ್ಲೇ ಕಾಯ್ದಿರಿಸದ ಕೋಚ್‌ಗಳೊಂದಿಗೆ ರೈಲುಗಳನ್ನು ಮರು-ಪ್ರಾರಂಭಿಸಲಿದೆ. ಈ ನಿರ್ಧಾರದಿಂದ ಹೋಳಿ ಹಬ್ಬಕ್ಕೆ ತಮ್ಮ ಊರುಗಳಿಗೆ ತೆರಳಲು ಬಯಸುವ ಪ್ರಯಾಣಿಕರಿಗೆ ದೊಡ್ಡ ಸಮಾಧಾನವಾಗಿದೆ.
ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ರೈಲುಗಳಲ್ಲಿ ಅನ್ ರಿಸರ್ವ್ಡ್ ಕೋಚ್‌ಗಳನ್ನು ಸ್ಥಗಿತಗೊಳಿಸಲಾಯಿತು. ಈಗ ಕಾಯ್ದಿರಿಸದ ಕೋಚ್‌ಗಳನ್ನು ಪುನರಾರಂಭಿಸಲು ಇಲಾಖೆ ನಿರ್ಧರಿಸಿದ್ದು, ಕೊರೋನಾ ಪೂರ್ವದಂತೆಯೇ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸದೆಯೂ ಪ್ರಯಾಣಿಸಬಹುದು.
ಮನೆ ಖರೀದಿಸಿದ ಮಹಿಳೆಗೆ ಸಿಕ್ತು ಕಂತೆ ಕಂತೆ ಪ್ರೇಮ ಪತ್ರ…!
ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ಸಾಮಾನ್ಯ ರೈಲು ಟಿಕೆಟ್ ಪಡೆಯಲು ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಈ ವ್ಯವಸ್ಥೆ ಜಾರಿಗೆ ಬಂದ ನಂತರ, ಎರಡನೇ ದರ್ಜೆಯ ಕಂಪಾರ್ಟ್‌ಮೆಂಟ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕೊರೋನಾ ಪೂರ್ವ ದಿನಗಳಂತೆಯೇ ನಿಲ್ದಾಣಕ್ಕೆ ಬಂದ ನಂತರ ಟಿಕೆಟ್ ಖರೀದಿಸಲು ಸಾಧ್ಯವಾಗುತ್ತದೆ. ಇದರಿಂದ ಕಾಯ್ದಿರಿಸಲು ಆಗದ ಹೆಚ್ಚಿನ ಪ್ರಯಾಣಿಕರಿಗೆ ರೈಲುಗಳಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ.